ಗೌರಿ ಲಂಕೇಶ್ ಹತ್ಯೆ ಆಗುತ್ತೆ ಅಂತ ಈತನಿಗೆ ಮೊದಲೇ ಗೊತ್ತಿತ್ತಂತೆ!

First Published 11, Mar 2018, 10:07 PM IST
Gauri Lankesh Accused Naveen Revealed Exclusive Information
Highlights

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜ ಸ್ಫೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಈ ಮೂಲಕ ಇಷ್ಟು ದಿನ ಆತ ಆಡುತ್ತಿದ್ದ ಹೈಡ್ರಾಮಾಕ್ಕೆ ತೆರೆಬಿದ್ದಿದೆ. 

ಬೆಂಗಳೂರು (ಮಾ.11): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜ ಸ್ಫೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಈ ಮೂಲಕ ಇಷ್ಟು ದಿನ ಆತ ಆಡುತ್ತಿದ್ದ ಹೈಡ್ರಾಮಾಕ್ಕೆ ತೆರೆಬಿದ್ದಿದೆ. 

ಗೌರಿ ಲಂಕೇಶ್ ಹತ್ಯೆಯಾದಾಗ ತಾನೂ ಊರಿನಲ್ಲೇ ಇರಲಿಲ್ಲ ಎಂಬಂತೆ ಬಿಂಬಿಸಲು ಮುಂದಾಗಿದ್ದ  ನವೀನ್  ಗೌರಿ ಹತ್ಯೆ ವಿಚಾರ ಗೊತ್ತಿದ್ದೇ ಮಂಗಳೂರಿಗೆ ಹೋಗಿದ್ದ ಎಂಬ ಸ್ಫೋಟಕ ಸತ್ಯ ಎಸ್ ಐಟಿ ಬಯಲಿಗೆಳೆದಿದೆ.  ಅಲ್ಲದೇ ಮಂಗಳೂರಿನ ಲಾಡ್ಜ್’ವೊಂದರಲ್ಲಿ ಕೂತಿದ್ದ ನವೀನ್  ಸುದ್ದಿವಾಹಿನಿಗಳಲ್ಲಿ ಗೌರಿ ಹತ್ಯೆಯ ಸುದ್ದಿ ಬಿತ್ತರವಾಗುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ದ ಎಂದು ತನಿಖೆ ವೇಳೆ ಬಯಲಾಗಿದೆ. 

ಇನ್ನೂ ವಿಚಾರವಾದಿಗಳಾದ ಗೋವಿಂದ್ ಪನ್ಸಾರೆ, ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರದ ಎಸ್ ಐ ಟಿ ತಂಡಗಳು ಕೂಡ ಮಂಜನ ಹಿಂದೆ ಬಿದ್ದಿವೆ.  

loader