ಗೌರಿ ಲಂಕೇಶ್ ಹತ್ಯೆ: ಪ್ರಕರಣದಿಂದ ಎಸ್ಕೇಪ್ ಆಗಲು ಆರೋಪಿಯಿಂದ ಮಾಸ್ಟರ್ ಪ್ಲಾನ್

First Published 4, Mar 2018, 10:29 AM IST
Gauri Lankesh Accused Master to escape
Highlights

ಪತ್ರಕರ್ತೆ ಗೌರಿ ಲಂಕೇಶ್​​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಂಕಿತ ಆರೋಪಿ ನವೀನ್​​ ಎಂಬಾತನನ್ನು ಎಸ್​ಐಟಿ ಬಂಧಿಸಿತ್ತು.  ಪ್ರಕರಣದಿಂದ ತಪ್ಪಿಸಿಕೊಳ್ಳುವುದಕ್ಕೆ ನವೀನ್​​ ಮಾಸ್ಟರ್​ ಪ್ಲಾನ್ ಮಾಡಿದ್ದಾನೆ.  ಎಸ್’​​ಐಟಿ ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಗೈದಿದ್ದಾನೆ.  ​​

ಬೆಂಗಳೂರು (ಮಾ. ೦4): ಪತ್ರಕರ್ತೆ ಗೌರಿ ಲಂಕೇಶ್​​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಂಕಿತ ಆರೋಪಿ ನವೀನ್​​ ಎಂಬಾತನನ್ನು ಎಸ್​ಐಟಿ ಬಂಧಿಸಿತ್ತು.  ಪ್ರಕರಣದಿಂದ ತಪ್ಪಿಸಿಕೊಳ್ಳುವುದಕ್ಕೆ ನವೀನ್​​ ಮಾಸ್ಟರ್​ ಪ್ಲಾನ್ ಮಾಡಿದ್ದಾನೆ.  ಎಸ್’​​ಐಟಿ ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಗೈದಿದ್ದಾನೆ.  ​​

ಬರೋಬ್ಬರಿ 45 ನಿಮಿಷಗಳ ಕಾಲ ಎಸ್​​ಐಟಿ  ಅಧಿಕಾರಿಗಳ ವಿರುದ್ದ ನವೀನ್ ದೂರು ನೀಡಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ನವೀನ್​​’ನನ್ನ ಎಸ್’ಐಟಿ ಕೋರ್ಟ್​​ಗೆ ಹಾಜರುಪಡಿಸಿತ್ತು. ಆಗ ನ್ಯಾಯಧೀಶರ ಮುಂದೆ ನವೀನ್​ ಅಲಿಯಾಸ್​ ಹೊಟ್ಟೆಮಂಜ ಎಸ್’ಐಟಿ ಅಧಿಕಾರಿಗಳ ವಿರುದ್ಧವೇ ದೂರು ನೀಡಿದ್ದಾನೆ.  

ನಾನು ನಿಮ್ಮ ಜೊತೆ ಏಕಾಂಗಿಯಾಗಿ ಮಾತನಾಡಬೇಕು. ಎಸ್’​ಐಟಿ ಅಧಿಕಾರಿಗಳನ್ನು ಹೊರಗಡೆ ಕಳುಹಿಸಿ ಎಂದು ನವೀನ್ ನ್ಯಾಯಧೀಶರನ್ನ ಕೇಳಿದ್ದ. ​ನವೀನ್​​ ಮನವಿಯಂತೆ ಎಸ್​ಐಟಿ ಅಧಿಕಾರಿಗಳನ್ನ ನ್ಯಾಯಾಧೀಶರು ಹೊರಗಡೆ ಕಳುಹಿಸಿದ್ದರು. ಈ ವೇಳೆ ಇಬ್ಬರು ಎಸ್​​ಐಟಿ ಅಧಿಕಾರಿಗಳ ವಿರುದ್ಧ ನವೀನ್ ದೂರಿನ ಸುರಿಮಳೆಗೈದಿದ್ದಾನೆ. ಎಸ್​’ಐಟಿ ಅಧಿಕಾರಿಗಳು ತಮ್ಮನ್ನು ​ಎನ್’ಕೌಂಟರ್​ ಮಾಡ್ತೀನಿ ಅಂತ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಹೆಂಡತಿ ಹಾಗೂ ತಂಗಿಯನ್ನ ಜೈಲಿನಲ್ಲಿ ಕೂರಿಸ್ತೀವಿ ಅಂತ ಹೇಳ್ತಿದ್ದಾರೆ. ನನಗೆ ಮಾನಸಿಕವಾಗಿ ಒತ್ತಡ ಹಾಕ್ತಿದ್ದಾರೆ ಎಂದಿದ್ದಾನೆ. 
ಪ್ರಕರಣದಿಂದ ಎಸ್ಕೇಪ್​​ ಆಗಲು ನವೀನ್ ಮಾಡಿರೋ ಮಾಸ್ಟರ್​​ಪ್ಲಾನ್​​ ಇದು ಎನ್ನಲಾಗುತ್ತಿದೆ. ​ಇದೀಗ ​ ನವೀನ್’​​ನನ್ನ  ವಶಕ್ಕೆ ಪಡೆದು ತೀವ್ರ ಎಸ್’ಐಟಿ ತೀವ್ರ ವಿಚಾರಣೆಗೊಳಪಡಿಸಿದೆ.  
​​  

loader