ರಾಸಾಯನ ಶಾಸ್ತ್ರ ವಿಷಯದಲ್ಲಿ ಪುಸ್ತಕಗಳ ಸಂಖ್ಯೆ ತೀರ ಕಡಿಮೆಯಿದೆ ಹಾಗಾಗಿ ಪುಸ್ತಕ ಬರೆಯುವ ಆಸಕ್ತಿಯಿದೆ ಎಂದು ತಿಳಿಸಿದ್ದಾನೆ.

'ಗ್ರ್ಯಾಜುಯೇಟ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಇನ್‌ ಎಂಜಿನಿಯರಿಂಗ್‌' (ಗೇಟ್‌) ಪರೀಕ್ಷೆಯ ರಸಾಯನ ಶಾಸ್ತ್ರ ವಿಷಯದಲ್ಲಿ ರೈತನ ಮಗನೊಬ್ಬ ದೇಶಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾನೆ.

ಲಖನೌ ಮೂಲದ ಪ್ರಶಾಂತ್ ಗುಪ್ತಾ ಎಂಬ ವಿದ್ಯಾರ್ಥಿ ಶೇ.71.67 ಅಂಕ ಗಳಿಸಿ ಮೊದಲ ಸ್ಥಾನ ಗಳಿಸಿದ್ದಾನೆ. ಹತ್ತರೊಳಗೆ ಯಾವುದಾದರೂ ಒಂದು ರ್‍ಯಾಂಕ್ ಪಡೆಯಬೇಕೆಂಬ ಗುರಿ ಹೊಂದಿದ್ದೆ ಆದರೆ ಟಾಪ್ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ' ರಾಸಾಯನ ಶಾಸ್ತ್ರ ವಿಷಯದಲ್ಲಿ ಪುಸ್ತಕಗಳ ಸಂಖ್ಯೆ ತೀರ ಕಡಿಮೆಯಿದೆ ಹಾಗಾಗಿ ಪುಸ್ತಕ ಬರೆಯುವ ಆಸಕ್ತಿಯಿದೆ ಎಂದು ತಿಳಿಸಿದ್ದಾನೆ.

ಉತ್ತರಪ್ರದೇಶ ಬೋರ್ಡ್ ಶಾಲೆಯಲ್ಲಿ ಕಲಿತ ಪ್ರಶಾಂತ್ 2015ರಲ್ಲಿ ಬಿಎಚ್‍ಯುನಿಂದ ಪದವಿ ಮತ್ತು 2017ರಲ್ಲಿ ಐಐಟಿ ದೆಹಲಿಯಿಂದ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು.