ಸುವರ್ಣ ನ್ಯೂಸ್ ತಂಡ ಒಂದು ರಹಸ್ಯ ಕಾರ್ಯಾಚರಣೆ ಮಾಡಿ, ಡೆಡ್ಲಿ ಗ್ಯಾಸ್​ ಬಾಂಬ್​ನ ಬಗ್ಗೆ ಸೀಕ್ರೆಟ್​ ಪತ್ತೆ ಹಚ್ಚಿದೆ. ಹಾಗಾದ್ರೆ ಆ ಗ್ಯಾಸ್​ ಬಾಂಬ್​ ಸೀಕ್ರೆಟ್​ ಯಾವುದು? ಅದು ಎಲ್ಲಿದೆ ಎನ್ನುವುದರ ವಿವರ ಇಲ್ಲಿದೆ.

ಬೆಂಗಳೂರು(ಸೆ.19): ಎಚ್ಚರ...ಕಟ್ಟೆಚ್ಚರ ! ಗ್ಯಾಸ್​ ಬಾಂಬ್​ಗಳಿವೆ ಜೋಕೆ. ಈ ಡೆಡ್ಲಿ ಗ್ಯಾಸ್​ ಬಾಂಬ್​ ಯಾವಾಗ ಬೇಕಾದ್ರೂ ಸ್ಫೋಟಗೊಳ್ಳಬಹುದು ಎಚ್ಚರ!. ಶಾಕಿಂಗ್​ ನ್ಯೂಸ್​ ಅಂದ್ರೆ ಈ ಗ್ಯಾಸ್​ ಬಾಂಬ್​ಗಳು ಜನವಸತಿ ಪ್ರದೇಶಗಳಲ್ಲೇ ಜೀವಂತವಾಗಿವೆ. ಇವುಗಳೇನಾದರೂ ಸ್ಫೋಟಗೊಂಡರೆ ಭಾರೀ ಅನಾಹುತ ಕಟ್ಟಿಟ್ಟ ಬುತ್ತಿ.

ಎಲ್ಲಿವೆ ಗ್ಯಾಸ್​ ಬಾಂಬ್​ ?

ಆ ಗ್ಯಾಸ್​ ಬಾಂಬ್​ಗಳು ಎಲ್ಲಿವೆ ಗೊತ್ತಾ? ಅಕ್ರಮ ಗ್ಯಾಸ್​ ಫಿಲ್ಲಿಂಗ್​ ಕೇಂದ್ರಗಳಲ್ಲಿ. ನಮ್ಮ ರಾಜಧಾನಿ ಬೆಂಗಳೂರಿನ ನಾನಾ ಕಡೆ ಅಕ್ರಮವಾಗಿ ಗ್ಯಾಸ್​ ಫಿಲ್ಲಿಂಗ್​ ದಂಧೆ ರಾಜಾರೋಷವಾಗಿಯೇ ನಡೆಯುತ್ತಿವೆ ಎನ್ನುವುದರ ಸುವರ್ಣ ನ್ಯೂಸ್ ನಡೆಸಿರುವ ರಹಸ್ಯ ಕಾರ್ಯಾಚರಣೆ ಬಯಲಾಗಿದೆ

ಅತ್ಯಂತ ಅಪಾಯಕಾರಿಯಾಗಿರೋ ಅಕ್ರಮ ಗ್ಯಾಸ್​ ಫಿಲ್ಲಿಂಗ್ ದಂಧೆ ಬೆಂಗಳೂರಿನ ಹೆಬ್ಬಾಳದ ಚಾಮುಂಡಿ ನಗರ ಮತ್ತು ಗುಡ್ಡದ ಹಳ್ಳಿಯಲ್ಲಂತು ಬಿಂದಾಸಾಗಿಯೇ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.

ಯಾವ ಸಿಲಿಂಡರ್​ ಬೇಕಾದ್ರೂ ತನ್ನಿ. ಈ ದಂಧೆಕೋರರು ತುಂಬಿಸಿಕೊಡ್ತಾರೆ. ಯಾವುದೇ ಸುರಕ್ಷತೆ ಇಲ್ಲದೆ, ಸುತ್ತಮುತ್ತಲ ಜನರ ಪ್ರಾಣಕ್ಕೆ ಸಂಚಕಾರ ತರೋ ಈ ದಂಧೆಕೋರರನ್ನ ಕೇಳುವವರೇ ಇಲ್ಲದಾಗಿದೆ

ಈ ದಂಧೆಕೋರರು ಪೊಲೀಸರಿಗೆ ಲಂಚ ಕೊಡುತ್ತಿರೋದ್ರಿಂದ ಇವರ ವಿರುದ್ಧ ದೂರು ಕೊಟ್ರೂ ಪೊಲೀಸರು ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಅಲ್ಲದೆ ಇವರಿಗೆ ಗ್ಯಾಸ್​ ಕಂಪೆನಿ ಏಜೆನ್ಸಿಯವರೇ ಅಕ್ರಮವಾಗಿ ಗ್ಯಾಸ್​ ಪೂರೈಸುತ್ತಿದ್ದಾರೆ ಅನ್ನೋದು ಸಾರ್ವಜನಿಕರ ದೂರು.

ಇಂಥಾ ಡೇಂಜರಸ್​​ ಕುಕೃತ್ಯಕ್ಕೆ ಬ್ರೇಕ್​ ಹಾಕದಿದ್ದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.