ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ ಈ ಬಾರಿ ಗ್ಯಾಸ್ ಮಾಫಿಯಾದೊಳಗೆ ಲಗ್ಗೆ ಇಟ್ಟು ಅಲ್ಲಿನ ಭ್ರಷ್ಟರ ಬಣ್ಣ ಬಯಲು ಮಾಡಿದೆ. ಈ ಮಾಫಿಯಾ ಜನಸಾಮಾನ್ಯರಿಗೆ ಸಿಗಬೇಕಾದ ಗ್ಯಾಸ್ ಸಿಲಂಡರನ್ನು ಕಾಳ ಸಂತೆಯಲ್ಲಿ ಮಾರಿ ಕೋಟಿ ಕೋಟಿ ಲೂಟಿ ಹೊಡೆಯೋ ಭ್ರಷ್ಟರ ಮುಖವಾಡ ಕಳಚಿದೆ.
ನಮ್ಮ ನಾಡಿನಲ್ಲಿ ನಡೆಯುತ್ತಿರೋ ಅನೇಕ ಮಾಫಿಯಾಗಳ ಪೈಕಿ ಗ್ಯಾಸ್ ಮಾಫಿಯಾ ಭಯಾನಕ ರೂಪ ಪಡೀತಿದೆ. ಈ ಮಾಫಿಯಾ ಜನಸಾಮಾನ್ಯರಿಗೆ ಮೋಸ ಮಾಡಿ ಕೋಟಿ ಕೋಟಿ ಲೂಟಿ ಹೊಡೆಯೋದು ಮಾತ್ರವಲ್ಲದೆ, ಜನರ ಪ್ರಾಣವನ್ನೂ ಅಪಾಯದಂಚಿಗೆ ತಳ್ಳುತ್ತಿದೆ. ಅದು ಹೇಗೆ ಅನ್ನೋದನ್ನ ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿದೆ.
ಯಸ್…ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ ಈ ಬಾರಿ ಗ್ಯಾಸ್ ಮಾಫಿಯಾದೊಳಗೆ ಲಗ್ಗೆ ಇಟ್ಟು ಅಲ್ಲಿನ ಭ್ರಷ್ಟರ ಬಣ್ಣ ಬಯಲು ಮಾಡಿದೆ. ಈ ಮಾಫಿಯಾ ಜನಸಾಮಾನ್ಯರಿಗೆ ಸಿಗಬೇಕಾದ ಗ್ಯಾಸ್ ಸಿಲಂಡರನ್ನು ಕಾಳ ಸಂತೆಯಲ್ಲಿ ಮಾರಿ ಕೋಟಿ ಕೋಟಿ ಲೂಟಿ ಹೊಡೆಯೋ ಭ್ರಷ್ಟರ ಮುಖವಾಡ ಕಳಚಿದೆ.
ಈ ಭ್ರಷ್ಟರು ಗ್ರಾಮೀಣ ಭಾಗದ ಜನರ ದಾಖಲೆಗಳನ್ನು ಪಡೆದು ಅವರಿಗೆ ಗೊತ್ತಿಲ್ಲದ ರೀತಿಯಲ್ಲಿ ಅಕ್ರಮವಾಗಿ ಗ್ಯಾಸ್ ಸಂಪರ್ಕ ಪಡೆಯುತ್ತಿದ್ದಾರೆ. ಅದನ್ನ ಕಾಳಸಂತೆಯಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಜನರಿಗೆ ಮೋಸ ಮಾಡ್ತಿದ್ದಾರೆ. ಈ ಮಾಫಿಯಾ ಮನೆಬಳಕೆಯ ನೂರಾರು ಗೃಹ ಬಳಕೆಯ ಸಿಲಿಂಡರ್ ಇಟ್ಟುಕೊಂಡು ಅಕ್ರಮವಾಗಿ ಹೆಚ್ಚಿನ ಹಣಕ್ಕೆ ಆಟೋಗಳಿಗೆ, ಸಿಲಿಂಡರ್ಗಳಿಗೆ ಗ್ಯಾಸ್ ರೀಫಿಲ್ಲಿಂಗ್ ಮಾಡುವ ಕಾಯಕದಲ್ಲೂ ತೊಡಗಿದೆ.
ಈ ರೀಫಿಲ್ಲಿಂಗ್ ದಂಧೆ ದೂರ ಎಲ್ಲೂ ಅಲ್ಲ ನಮ್ಮ ರಾಜಧಾನಿ ಬೆಂಗಳೂರಿನ ಹೆಬ್ಬಾಳದ ಚಾಮುಂಡಿ ನಗರ ಮತ್ತು ಗುಡ್ಡದ ಹಳ್ಳಿಯಲ್ಲೇ ರಾಜಾರೋಷವಾಗಿ ನಡೀತಿದೆ.
ಈ ಮಾಫಿಯಾ ಮಂದಿ ಅತ್ಯಂತ ಡೇಂಜರ್ ಆಗಿರೋ ಗ್ಯಾಸ್ ಸಿಲಿಂಡರನ್ನು ಮನೆಗಳಲ್ಲಿ, ಸುರಕ್ಷಿತವೇ ಇಲ್ಲದ ಗೋಡೌನ್, ರಸ್ತೆ ಬದಿಗಳಲ್ಲಿ ಸಂಗ್ರಹಿಸಿ ಭಾರೀ ಅಪಾಯ ತಂದೊಡ್ಡುತ್ತಿದೆ. ಇಂಥಾ ನಿರ್ಲಕ್ಷದಿಂದ ಈಗಾಗ್ಲೇ ನಮ್ಮ ನಾಡಲ್ಲಿ ಭಾರೀ ಅನಾಹುತಗಳು ಸಂಭವಿಸಿವೆ.
ಈಗಲಾದ್ರೂ ಗ್ಯಾಸ್ ಕಂಪೆನಿಗಳು ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಈ ಮಾಫಿಯಾದ ಹೆಡೆಮುರಿ ಕಟ್ಟಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ.
ವರದಿ: ರಂಜಿತ್ ಕುಮಾರ್ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್
