ಮಂಗಳಾರತಿಗೂ ಮುನ್ನ ಹರಿದು ಬಿತ್ತು ಬಾಹುಬಲಿಗೆ ಹಾಕುವ ಹಾರ

First Published 18, Feb 2018, 4:37 PM IST
Garland cut in Mahamastakabhisheka
Highlights

ಮಹಾಮಸ್ತಕಾಭಿಶೇಕ ವೇಳೆ ಬಾಹುಬಲಿ ಮೂರ್ತಿಗೆ ಹಾರ ಹಾಕುವ ವೇಳೆ 3 ಬಾರಿ ಹಾರ ಬಿದ್ದಿದೆ.  ಶ್ರವಣಬೆಳಗೊಳದಲ್ಲಿ ಬಾಹುಬಲಿಯ 88 ನೇ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು ಎರಡನೇ ದಿನವಾದ ಇಂದು  ಮಹಾಮಸ್ತಕಾಭಿಷೇಕದ ಬಳಿಕ ಹಾರ ಹಾಕಲು ಹೋದಾಗ 3 ಬಾರಿ ಕೆಳಗೆ ಬಿದ್ದಿದೆ.  ಹಗ್ಗದ ಮೂಲಕ ಸುಮಾರು 70 ಅಡಿ ಹೂವಿನ ಹಾರ ಅರ್ಪಿಸಿದಾಗ  ಹಗ್ಗ ಜಾರಿ ಬಿದ್ದಿದೆ. 

ಹಾಸನ (ಫೆ. 17): ಮಹಾಮಸ್ತಕಾಭಿಶೇಕ ವೇಳೆ ಬಾಹುಬಲಿ ಮೂರ್ತಿಗೆ ಹಾರ ಹಾಕುವ ವೇಳೆ 3 ಬಾರಿ ಹಾರ ಬಿದ್ದಿದೆ.  ಶ್ರವಣಬೆಳಗೊಳದಲ್ಲಿ ಬಾಹುಬಲಿಯ 88 ನೇ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು ಎರಡನೇ ದಿನವಾದ ಇಂದು  ಮಹಾಮಸ್ತಕಾಭಿಷೇಕದ ಬಳಿಕ ಹಾರ ಹಾಕಲು ಹೋದಾಗ 3 ಬಾರಿ ಕೆಳಗೆ ಬಿದ್ದಿದೆ.  ಹಗ್ಗದ ಮೂಲಕ ಸುಮಾರು 70 ಅಡಿ ಹೂವಿನ ಹಾರ ಅರ್ಪಿಸಿದಾಗ  ಹಗ್ಗ ಜಾರಿ ಬಿದ್ದಿದೆ. 

ಬಾಹುಬಲಿಗೆ ಇಂದು ಮಧ್ನಾಹ್ನ ಮಹಾಮಂಗಳಾರತಿಗೆ ಮುಂಚೆ ಈ ಘಟನೆ ನಡೆದಿದೆ.  ಹಳದಿ ಸೇವಂತಿಗೆ, ಮಲ್ಲಿಗೆ, ಗುಲಾಬಿ ಸೇರಿ 53 ಬಗೆ ಹೂವುಗಳ ಹಾರ ಇದಾಗಿತ್ತು.  ಹಾರ ಕೆಳಗೆ ಬೀಳಿಸಿದ್ದರಿಂದ ಸಹಸ್ರಾರು ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 

loader