ನವ​ದೆ​ಹ​ಲಿ[ಜು.20]: ಬಡವರಿಗೂ ಅಗ್ಗದ ದರದಲ್ಲಿ ಎಸಿ ರೈಲುಗಳ ಸೇವೆ ನೀಡುವ ‘ಗರೀಬ್‌ ರಥ್‌’ ಎಕ್ಸ್‌ಪ್ರೆಸ್‌ ರೈಲು ಸೇವೆ ಸ್ಥಗಿತಗೊಳಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ.

ಬಡವರ ಎಸಿ ರೈಲು ಗರೀಬ್‌ ರಥ ಸಂಚಾರ ಸ್ಥಗಿತಕ್ಕೆ ಚಿಂತನೆ?

ಈ ರೈಲು ಸೇವೆಯನ್ನು ಸ್ಥಗಿತಗೊಳಿಸುತ್ತಿಲ್ಲ. ಆದರೆ, ರೈಲುಬೋಗಿಗಳ ಕೊರತೆಯಿಂದಾಗಿ ಕಠ್‌ಗೋದಾಮ್‌- ಜಮ್ಮು ಮತ್ತು ಕಠ್‌ಗೋದಾಮ್‌- ಕಾನ್ಪುರ ನಡುವಿನ ರೈಲು ಮಾರ್ಗದಲ್ಲಿ ತಾತ್ಕಾಲಿಕವಾಗಿ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲಾಗುತ್ತಿದೆ. ಆ.4ರಿಂದ ಈ ಮಾರ್ಗದಲ್ಲಿ ಗರೀಬ್‌ರಥ್‌ ಸೇವೆ ಆರಂಭವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ದೇಶದೆಲ್ಲಡೆ 26 ಗರೀಬ್‌ ರಥ್‌ ರೈಲುಗಳು ಸಂಚರಿಸುತ್ತಿದ್ದು, ಅವುಗಳನ್ನು ಬದಲಿಸುವ ಯೋಜನೆ ಸದ್ಯಕ್ಕೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2006ರಲ್ಲಿ ಬಡಜನರಿಗಾಗಿಯೇ ಆರಂಭಿಸಿದ್ದ ಗರೀಬ್‌ ರಥ ರೈಲುಗಳು ನಿರ್ವಹಣೆ ಕಷ್ಟದಾಯಕವಾದ ಹಿನ್ನೆಲೆಯಲ್ಲಿ ಅವುಗಳ ಬದಲು ಎಕ್ಸ್‌ಪ್ರೆಸ್‌ ರೈಲುಗಳ ಸೇವೆ ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ವರದಿಯಾಗಿತ್ತು.