ಐಚೇಂಜ್ ಇಂದಿರಾನಗರದ ರೂವಾರಿ ಸ್ನೇಹಾ ನಂದಿಹಾಳ್ ಮನೆ ಮುಂದೆ ಬಿಬಿಎಂಪಿ ಸಿಬ್ಬಂದಿಯೇ ಕಸ ತಂದು ಸುರಿದ ಘಟನೆ ನಡೆದಿದೆ. ಇದಕ್ಕೆ ಕಾರಣ ಕಸದ ಮಾಫಿಯಾಗೆ ಕೈಜೋಡಿಸಿರುವ ಕಾರ್ಪೊರೇಟರ್‌'ಗಳ ಕಸದ ಆದಾಯಕ್ಕೆ ಎನ್‌ಜಿಓಗಳಿಂದ ಹೊಡೆತ ಬಿದ್ದಿರುವುದು. ಇಂದಿರಾನಗರ ಸುತ್ತಮುತ್ತಲ ವಾರ್ಡ್ ಗಳಲ್ಲಿ ಮನೆ ಮನೆಗಳಿಂದ ಕಸವನ್ನು ಸಂಗ್ರಹಿಸಬೇಕಾದ ಆಟೋಗಳು ವಾಣಿಜ್ಯ ಉದ್ದೇಶದ ಕಟ್ಟಡ, ಹೋಟೆಲ್, ಬಾರ್ ರೆಸ್ಟೋರೆಂಟ್'ಗಳಿಂದ ಹಣ ಪಡೆದುಕೊಂಡು ಕಸ ಸಂಗ್ರಹಿಸುತ್ತಿದ್ದವು. ಇದನ್ನು ವಿರೋಧಿಸಿ ಸ್ನೇಹಾ ಸಾಕಷ್ಟು ಹೋರಾಟ ಮಾಡಿದ್ದರು. ಇದೇ ಕಾರಣಕ್ಕೆ ಮನೆಯೊಳಗೆ ಕಸ ತಂದು ಸುರಿಯಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ, ಕಾರ್ಪೋರೇಟರ್ ಆನಂದ್ ಕುಮಾರ್ ಬಾಯಿಗೆ ಬಂದಿದ್ದು ಮಾತನಾಡುತ್ತಾರೆ.
ಬೆಂಗಳೂರು(ಅ.09): ಸ್ವಚ್ಛ ಉತ್ಸವ ಮಾಡುವ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬಿಬಿಎಂಪಿ ಮೇಯರ್, ಆಯುಕ್ತರಿಗೆ ದೊಡ್ಡ ಅವಮಾನವಾಗುವ ಘಟನೆ ನಡೆದಿದೆ. ಕಸ ತೆಗೆಯುವ ಮಂದಿಯೇ ಕಸವನ್ನು ಸುರಿದು ದೊಡ್ಡ ರಾದ್ದಾಂತ ಮಾಡಿದ್ದಾರೆ. ಬಿಬಿಎಂಪಿ ಗಲ್ಲಿ ಗಲ್ಲಿಯನ್ನೂ ಕ್ಲೀನ್ ಮಾಡುತ್ತೇವೆ ಎನ್ನುವವರು ತಪ್ಪದೇ ಓದಬೇಕಾದಂತಹ ಸ್ಟೋರಿ ಇದು.
ಮನೆ ಬಾಗಿಲಿಗೆ ಕಸ ತಂದು ಸುರಿದು ಬಿಬಿಎಂಪಿ ಸಿಬ್ಬಂದಿ ಪಾಲಿಕೆಯನ್ನು ಜನರ ಮುಂದೆಯೇ ಅವಮಾನಿಸಿಬಿಟ್ಟಿದ್ದಾರೆ. ಹೌದು, ಐಚೇಂಜ್ ಇಂದಿರಾನಗರದ ರೂವಾರಿ ಸ್ನೇಹಾ ನಂದಿಹಾಳ್ ಮನೆ ಮುಂದೆ ಈ ಘಟನೆ ನಡೆದಿದೆ. ಇದಕ್ಕೆ ಕಾರಣ ಕಸದ ಮಾಫಿಯಾಗೆ ಕೈಜೋಡಿಸಿರುವ ಕಾರ್ಪೊರೇಟರ್'ಗಳ ಕಸದ ಆದಾಯಕ್ಕೆ ಎನ್ಜಿಓಗಳಿಂದ ಹೊಡೆತ ಬಿದ್ದಿರುವುದು.
ಇಂದಿರಾನಗರ ಸುತ್ತಮುತ್ತಲ ವಾರ್ಡ್ ಗಳಲ್ಲಿ ಮನೆ ಮನೆಗಳಿಂದ ಕಸವನ್ನು ಸಂಗ್ರಹಿಸಬೇಕಾದ ಆಟೋಗಳು ವಾಣಿಜ್ಯ ಉದ್ದೇಶದ ಕಟ್ಟಡ, ಹೋಟೆಲ್, ಬಾರ್ ರೆಸ್ಟೋರೆಂಟ್'ಗಳಿಂದ ಹಣ ಪಡೆದುಕೊಂಡು ಕಸ ಸಂಗ್ರಹಿಸುತ್ತಿದ್ದವು. ಇದನ್ನು ವಿರೋಧಿಸಿ ಸ್ನೇಹಾ ಸಾಕಷ್ಟು ಹೋರಾಟ ಮಾಡಿದ್ದರು. ಇದೇ ಕಾರಣಕ್ಕೆ ಮನೆಯೊಳಗೆ ಕಸ ತಂದು ಸುರಿಯಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ, ಕಾರ್ಪೋರೇಟರ್ ಆನಂದ್ ಕುಮಾರ್ ಬಾಯಿಗೆ ಬಂದಿದ್ದು ಮಾತನಾಡುತ್ತಾರೆ.
ಸದ್ಯ ಗಾರ್ಬೇಜ್ ಮಾಫಿಯಾದಿಂದ ದೌರ್ಜನ್ಯಕ್ಕೊಳಗಾಗಿರುವ ಸ್ನೇಹಾ ಅವರಿಗೆ ಸ್ಥಳೀಯ ನಿವಾಸಿಗಳು ಬೆಂಬಲಕ್ಕೆ ನಿಂತಿದ್ದಾರೆ. ಮನೆ ಮುಂದೆ ಕಸ ಸುರಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಯೋಚಿಸಲಾಗುತ್ತಿದೆ. ಒಟ್ನಲ್ಲಿ, ಇಂಥಾ ಘಟನೆಯಿಂದ ಈಗ ಮೇಯರ್ ಮತ್ತು ಕಮಿಷನರ್ ಮುಜುಗರಕ್ಕೆ ಸಿಲುಕಿದ್ದಾರೆ.
