ಲೋಕಸಭೆಯಲ್ಲೇ ಮೋದಿಗೆ ಅವಮಾನಿಸಿದ ‘ಕೈ’ಲೋಕಸಭೆ ನಾಯಕ..!| ‘ಇಂದಿರಾ ಗಾಂಧಿ ಗಂಗೆಯಂತೆ ಪವಿತ್ರಳು, ಮೋದಿ ಕೊಳಚೆ ಮೋರಿ ಇದ್ದಂತೆ’| ‘ಇಂದಿರಾಗಾಂಧಿ ಸಮರ್ಥಿಸಿಕೊಳ್ಳುವ ಭರದಲ್ಲಿ ಮೋದಿಗೆ ಅವಮಾನ| ‘ಗಂಧಿ ನಾಲೆ’ ಹೇಳಿಕೆಯಿಂದ ಲೋಕಸಭೆಯಲ್ಲಿ ಕೋಲಾಹಲ

ನವದೆಹಲಿ[ಜೂ.24]: ಮೋದಿ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಸರ್ಕಾರ ರಚಿಸಿದ್ದಾರೆ. ಇದರ ಬೆನ್ನಲ್ಲೇ ಲೋಕಸಭಾ ಅಧಿವೇಶನವೂ ಆರಂಭವಾಗಿದೆ. ಆದರೆ ಸಂಸತ್ ಕಲಾಪದಲ್ಲಿ ಎಂದಿನಂತೆ ಪಕ್ಷ ಪ್ರತಿಪಕ್ಷಗಳ ವಾಗ್ದಾಳಿ ಮುಂದುವರೆದಿದೆ. ಆದರೀಗ ಕೈ ಪಕ್ಷದ ಲೋಕಸಭೆಯ ಸಂಸದೀಯ ನಾಯಕ ಅಧೀರ್ ರಂಜನ್ ಇಂದಿರಾ ಗಾಂಧಿಯನ್ನು ಹೊಗಳುವ ಭರದಲ್ಲಿ ಮೋದಿಯನ್ನು ಅವಮಾನಿಸಿದ್ದಾರೆ.

ಹೌದು ಲೋಕಸಭಾ ಕಲಾಪದಲ್ಲಿ ಇಂದಿರಾ ಮಾ ಗಂಗೆಯಂತೆ ಪವಿತ್ರಳು, ಆದರೆ ನರೇಂದ್ರ ಮೋದಿ 'ಗಂಧಿ ನಾಲೆ' ಇದ್ದಂತೆ ಎಂದು ಕೊಳಚೆ ಮೋರಿಗೆ ಹೋಲಿಸಿದ್ದಾರೆ. ಇಷ್ಟೇ ಅಲ್ಲದೇ ಮೋದಿಯನ್ನು ವಿವೇಕಾನಂದರಿಗೆ ಹೋಲಿಸಬೇಡಿ ಎಂದೂ ಅಧೀರ್ ಧ್ವನಿ ಎತ್ತಿದ್ದಾರೆ. ಕೈ ನಾಯಕನ ಈ ಹೇಳಿಕೆಯಿಂದ ಕುಪಿತರಾದ ಬಿಜೆಪಿ ನಾಯಕರು ನೀವು ಕೂಡಾ ನೀವು ಇಂದಿರಾರನ್ನು ಇಂಡಿಯಾಗೆ ಹೋಲಿಸದಿರಿ ಎಂದು ಕಿಡಿ ಕಾರಿದ್ದಾರೆ.

ರಾಹುಲ್, ಸೋನಿಯಾರನ್ನೇಕೆ ಜೈಲಿಗೆ ಕಳುಹಿಸಿಲ್ಲ?

ಇನ್ನು ಪ್ರಧಾನಿ ಮೋದಿಯ ಲೋಕಸಭಾ ಚುನಾವಣಾ ಭಾಷಣವನ್ನು ಉಲ್ಲೇಖಿಸಿರುವ ಅಧೀರ್ ರಂಜನ್ 'ನೀವು ಚುನಾವಣಾ ಪ್ರಚಾರದಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿಯನ್ನು ಚೋರ್[ಕಳ್ಳರು] ಎಂದು ಕರೆದು ಅಧಿಕಾರಕ್ಕೇರಿದಿರಿ. ಆದರೆ 2ಜಿ ಹಗರಣ, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅವರನ್ನು ಜೈಲಿಗೆ ಕಳುಹಿಸಲು ನಿಮ್ಮಿಂದ ಸಾಧ್ಯವಾಯಿತೇ? ನೀವು ಅವರನ್ನು ಕಳ್ಳರು ಎಂದಿದ್ದೀರಿ, ಹಾಗಾದ್ರೆ ಅವರೇಕೆ ಇಂದು ಸಂಸತ್ತಿನಲ್ಲಿ ಕುಳಿತಿದ್ದಾರೆ?' ಎಂದು ಮೋದಿಗೆ ಕಾರವಾಗಿ ಪ್ರಶ್ನಿಸಿದ್ದಾರೆ.

Scroll to load tweet…

ಒಟ್ಟಾರೆಯಾಗಿ ಅಧೀರ್ ಮೋದಿ ವಿರುದ್ಧ ನೀಡಿರುವ ಹೇಳಿಕೆಗೆ ಬಿಜೆಪಿ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಸತ್ತಿನಲ್ಲಿ ಕೆಲ ಸಮಯ ಕೋಲಾಹಲ ನಿರ್ಮಾಣವಾಗಿದೆ.