ಬೆಂಗಳೂರು, [ಡಿ.14]: ಸಲಿಂಗ ಕಾಮಕ್ಕೆ ಕರೆದು ಹಣ ಓಡವೆ ದೋಚುತಿದ್ದ ಆರೋಪಿಗಳ ಗ್ಯಾಂಗ್ ಅನ್ನು ಇಂದು [ಶುಕ್ರವಾರ] ಬೆಂಗಳೂರಿನ ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

 ಪ್ರಭಾಕರ್, ಕುಮಾರ್, ಚಂದನ್ ಬಂಧಿತ ಆರೋಪಿಗಳು. ಥ್ರೂತ್ ಪಾಯಿಂಟ್ ಅನ್ನೋ ಆನ್​ಲೈನ್​ ವೆಬ್ ಸೈಟ್ ಮೂಲಕ ಸಲಿಂಗ ಕಾಮಿಗಳಿಗೆ ಆಹ್ವಾನ ನೀಡುತ್ತಿದ್ದರು.

ಒಂದು ವೇಳೆ ಸಲಿಂಗ್ ಕಾಮಿಗಳು ಈ ದುಷ್ಕರ್ಮಿಗಳು ಕೊಟ್ಟ ಅಡ್ರೆಸ್​ಗೆ ಬಂದರೆ ಅವರಿಂದ ಹಣ, ಚಿನ್ನಾಭರಣ ಮಾತ್ರವಲ್ಲದೇ, ಮೈ ಮೇಲೆ ಇದ್ದ ಬಟ್ಟೆಯನ್ನೂ ಕಿತ್ತುಕೊಂಡು ಕಳುಹಿಸುತ್ತಿದ್ದರು. 

ಇಷ್ಟಕ್ಕೇ ಸುಮ್ಮನಾಗದ ಈ ಖದೀಮರು, ನಿಮ್ಮ ಕಾಮಕೇಳಿಯನ್ನ ವೀಡಿಯೋ ಮಾಡಿದ್ದೀವಿ ಹಣ ಕೊಡು ಅಂತಾ ಮತ್ತೆ ಮತ್ತೆ ಪೀಡಿಸುತಿದ್ದರು. ಸದ್ಯ ಈ ಆರೋಪಿಗಳು ಮೈಕೋ ಲೇಔಟ್ ಪೊಲೀಸರ ಅಥಿತಿಗಳಾಗಿದ್ದಾರೆ.