ಬೆಳಗಾವಿ ಸಿಸಿಬಿ ಪೊಲೀಸ್ರು ಭರ್ಜರಿ ಬೇಟೆಯಾಡಿದ್ದಾರೆ. ಹಳೆಯ 500 ಮತ್ತು 1000 ರುಪಾಯಿ ಮುಖಬೆಲೆ ನೋಟುಗಳನ್ನು ಬದಲಿ ಮಾಡಿಕೊಂಡುವ ಮರಿ ಬಾಂಬ್‌ ನಾಗಾ ಸೇರಿ 6 ಜನರನ್ನು ಬಂಧಿಸಿದ್ದಾರೆ. ಖದೀಮರಿಂದ ಪೊಲೀಸರು 3 ಕೋಟಿ 11 ಲಕ್ಷದ ಹಳೆ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು(ಜು.11): ಬೆಳಗಾವಿ ಸಿಸಿಬಿ ಪೊಲೀಸ್ರು ಭರ್ಜರಿ ಬೇಟೆಯಾಡಿದ್ದಾರೆ. ಹಳೆಯ 500 ಮತ್ತು 1000 ರುಪಾಯಿ ಮುಖಬೆಲೆ ನೋಟುಗಳನ್ನು ಬದಲಿ ಮಾಡಿಕೊಂಡುವ ಮರಿ ಬಾಂಬ್‌ ನಾಗಾ ಸೇರಿ 6 ಜನರನ್ನು ಬಂಧಿಸಿದ್ದಾರೆ. ಖದೀಮರಿಂದ ಪೊಲೀಸರು 3 ಕೋಟಿ 11 ಲಕ್ಷದ ಹಳೆ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗಾವಿಯ CCB ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನೋಟು ಅದಲು-ಬದಲಿ ಜಾಡನ್ನು ಹಿಡಿದು ಜೈಲಿಗಟ್ಟಿದೆ. ನಿನ್ನೆ ಸಂಜೆ ಖಚಿತ ಮಾಹಿತಿ ಮೇರೆಗೆ ಕೃಷ್ಣದೇವರಾಯ ಸರ್ಕಲ್​​'ನಲ್ಲಿರುವ ರೋಹಣ ರೆಸಿಡೆನ್ಸಿ ಮೇಲೆ ದಾಳಿ ನಡೆಸಿದ್ದಾರೆ. ಈ ಟೈಮ್ನಲ್ಲಿ ಹಳೆಯ 500 ಮತ್ತು 1000 ರುಪಾಯಿ ಮುಖಬೆಲೆ ನೋಟು ಅದಲು-ಬದಲು ಮಾಡುವ ಮರಿ ಬಾಂಬ್‌ ನಾಗ ಸೇರಿ ಆರು ಆರೋಪಿಗಳನ್ನ ಬಂಧಿಸಿದ್ದಾರೆ.

ಕೋಟ್ಯಂತರ ರುಪಾಯಿ ಹಣವನ್ನ ಜನರಿಂದ ಸಂಗ್ರಹಿಸಿ ಕಮೀಷನ್‌ ಮೇಲೆ ಪ್ರಮುಖ ಆರೋಪಿ ಅನಿಲ್​ ಪಟೇಲ್‌ ವ್ಯವಹಾರ ಮಾಡುತ್ತಿದ್ದ. ನನಗೆ RBIನಲ್ಲಿ ಗೊತ್ತಿದ್ದಾರೆ ಅಂತ ಅನಿಲ್ ಹೇಳಿಕೊಂಡು ಕಪ್ಪು ಹಣ ಇರೋರನ್ನ ನಂಬಿಸುತ್ತಿದ್ದನು. ಈ ಮಾತನ್ನ ನಂಬಿ ಲಕ್ಷಾಂತರ ರುಪಾಯಿ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಬಂದಿದ್ದ ಗೋವಾ, ಪುನಾ ಹಾಗೂ ಮೀರಜ್‌ನಿಂದ ಬಂದಿದ್ದವರನ್ನೂ ಪೊಲೀಸರು ಬಂಧಿಸಿದ್ದಾರೆ. ಈವರೆಗೂ ಅನಿಲ್ ಪಟೇಲ್​ ಎಷ್ಟು ಮೊತ್ತದ ಹಣವನ್ನು ಅದಲು-ಬದಲು ಮಾಡಿದ್ದಾನೆ. ನಿಜವಾಗಿಯೂ ಆರ್‌ಬಿಐನಲ್ಲಿ ನಂಟು ಇತ್ತೇ ಅನ್ನೋ ಪ್ರಶ್ನೆಗಳು ಮುಂದಿಟ್ಟುಕೊಂಡು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ..

ಬೆಳಗಾವಿಯ APMC ಸ್ಟೇಷನ್​​ನಲ್ಲಿ ಕೇಸ್​ ಬುಕ್ ಮಾಡಿರೋ ಪೊಲೀಸ್ರು ಎಲ್ಲ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಿನಲ್ಲಿ ದೇಶದಲ್ಲಿ ಇನ್ನೂ ಹಳೆಯ ನೋಟುಗಳ ಅದಲು-ಬದಲು ಧಂದೆ ಅವ್ಯಾಹತವಾಗಿ ನಡೆದಿದೆ ೆನ್ನುವುದು ಈ ಪ್ರಕರಣದಿಂದ ರುಜುವಾತು ಆಗಿದೆ.