ವಿಜೃಂಭಣೆ ಗಣೇಶ ಹಬ್ಬ ಆಚರಣೆ ನಂತರ ನಿನ್ನೆ ತಡರಾತ್ರಿ ಸಿಲಿಕಾನ್ ಸಿಟಿಯಲ್ಲಿ ಸಾವಿರಾರು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.

ಬೆಂಗಳೂರು(ಆ.26): ವಿಜೃಂಭಣೆ ಗಣೇಶ ಹಬ್ಬ ಆಚರಣೆ ನಂತರ ನಿನ್ನೆ ತಡರಾತ್ರಿ ಸಿಲಿಕಾನ್ ಸಿಟಿಯಲ್ಲಿ ಸಾವಿರಾರು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಡರಾತ್ರಿ 12 ಗಂಟೆ ವರೆಗೂ ಗಣೇಶ ವಿಸರ್ಜನೆ ನಡೆಯಿತು. ನಗರದ ಸ್ಯಾಂಕಿ, ಹೆಬ್ಬಾಳ, ಹಲಸೂರು ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ 36 ಕೆರೆಗಳಲ್ಲಿ ಗಣೇಶ ವಿಸರ್ಜನೆ ನಡೆಯಿತು. ಗಣೇಶ ವಿಸರ್ಜನೆಗೆ ಬಿಬಿಎಂಪಿ 257 ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ 40 ಕಡೆ ಸಂಚಾರಿ ಟ್ಯಾಂಕರ್ ವ್ಯವಸ್ಥೆ ಮಾಡಿವೆ. ವ್ಯವಸ್ಥಿತವಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪುಷ್ಕರಣಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ.

ಸ್ಯಾಂಕಿ ಕೆರೆಯಲ್ಲಿ ಒಂದೇ ದಿನ 22 ಸಾವಿರ ಗಣೇಶ ವಿಸರ್ಜನೆಯಾಗಿವೆ. ಇನ್ನೂ ಪಿಒಪಿ ಗಣೇಶನ ಪ್ರತಿಷ್ಠಾಪನೆ ನಿಷೇಧಿಸಲಾಗಿದೆ. ಆದರೂ ನಿನ್ನೆ 350 ಪಿಒಪಿ ಗಣೇಶ ವಿಸರ್ಜನೆಯಾಗಿದೆ.