Asianet Suvarna News Asianet Suvarna News

ಬರೋಬ್ಬರಿ 69 ವರ್ಷಗಳ ಬಳಿಕ ಗಾಂಧಿ ಹತ್ಯೆಯ ಕುರಿತು ತನಿಖೆ!

ರಾಷ್ಟ್ರಪಿತನ  ಹತ್ಯೆಗೆ ಸಂಬಂಧಿಸಿದಂತೆ ಬರೋಬ್ಬರಿ 69ವರ್ಷಗಳ ಬಳಿಕ ಭಾರತ ಸರ್ಕಾರ ವಿಚಾರಣೆ ಮಾಡುವಂತೆ ಆದೇಶ ನೀಡಿದೆ. ಮಹಾತ್ಮನ ಹತ್ಯೆಯ ಪ್ರಕರಣದಲ್ಲಿ ತಲೆಮರಿಸಿಕೊಂಡಿರುವ  ಪ್ರಮುಖ ಮೂವರು ಆರೋಪಿಗಳ ಕುರಿತು ವಿಚಾರಣೆ ಮಾಡುವಂತೆ ಕೇಂದ್ರ ಮಾಹಿತಿ ಆಯೊಗ ಕೇಳಿಕೊಂಡಿದ್ದು ಇದಕ್ಕೆ ಸಂಬಂದಿಸಿದಂತೆ ಸರ್ಕಾರ  ವಿಚಾರಣೆ ಕೈಗೆತ್ತಿಕೊಳ್ಳುವಂತೆ ಆದೇಶ ಮಾಡಿದೆ.

Gandhis Assassin Is In The News Again

ನವದೆಹಲಿ(ಫೆ.21): ರಾಷ್ಟ್ರಪಿತನ  ಹತ್ಯೆಗೆ ಸಂಬಂಧಿಸಿದಂತೆ ಬರೋಬ್ಬರಿ 69ವರ್ಷಗಳ ಬಳಿಕ ಭಾರತ ಸರ್ಕಾರ ವಿಚಾರಣೆ ಮಾಡುವಂತೆ ಆದೇಶ ನೀಡಿದೆ. ಮಹಾತ್ಮನ ಹತ್ಯೆಯ ಪ್ರಕರಣದಲ್ಲಿ ತಲೆಮರಿಸಿಕೊಂಡಿರುವ  ಪ್ರಮುಖ ಮೂವರು ಆರೋಪಿಗಳ ಕುರಿತು ವಿಚಾರಣೆ ಮಾಡುವಂತೆ ಕೇಂದ್ರ ಮಾಹಿತಿ ಆಯೊಗ ಕೇಳಿಕೊಂಡಿದ್ದು ಇದಕ್ಕೆ ಸಂಬಂದಿಸಿದಂತೆ ಸರ್ಕಾರ  ವಿಚಾರಣೆ ಕೈಗೆತ್ತಿಕೊಳ್ಳುವಂತೆ ಆದೇಶ ಮಾಡಿದೆ.

ಮೂವರು ಅಪರಾಧಿಗಳ ವಿಚಾರಣೆಗೆ ಆದೇಶ ನೀಡಿದ ಸರ್ಕಾರ

ಅಂದು ೩೦, ೧೯೪೮ ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ  ಸಂಜೆ ಪ್ರಾರ್ಥನೆಗೆ  ಹೋಗುವ ಸಮಯದಲ್ಲಿ ನಾಥೂರಾಮ್ ಗೋಡ್ಸೆ ಹಾಗೂ ಸಹಚರರು ಗುಂಡಿಕ್ಕಿ ಕೊಲೆ ಮಾಡುತ್ತಾರೆ. ಆದರೆ ಈ ಪ್ರಕಣದಲ್ಲಿ ಬಾಗಿಯಾಗಿದ್ದ ಮೂವರು ಆರೋಪಿಗಳಾದ  ಗಂಗಾಧರ ದಹವಾಟೆ,  ಗಂಗಾಧರ ಜಾಧವ್ ಹಾಗೂ ಸರ್ಯೂ ದೇವ್  ಶರ್ಮ ಹತ್ಯೆಯ ಬಳಿಕ ತಲೆಮರಿಸಿಕೊಂಡಿದ್ದರು. ಇನ್ನು ಈ ಮೂವರ ಪತ್ತೆಗೆ ಸರ್ಕಾರ ಯಾವ ಕ್ರಮ ಕೈ ಗೊಂಡಿದೆ ಎಂಬ ಪ್ರಶ್ನೆಯನ್ನು ಎತ್ತಿದ್ದಾಗಲೇ  ಈ ಆರೋಪಿಗಳ ವಿಚಾರಣೆಗೆ ಸರ್ಕಾರ ಆದೇಶ ನೀಡಿರುವುದು ವಿಪರ್ಯಾಸವೇ ಸರಿ

ಹೌದು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಓರಿಸ್ಸಾದ ಹೇಮಂತ್ ಪಾಂಡ ಆರ್ ಟಿಐ ಕಾಯ್ದೆಯ ಅಡಿಯಲ್ಲಿ  ಗಾಂಧಿಯ ಹತ್ಯೆಯ ಪ್ರಕರಣದಲ್ಲಿ ತೆಲೆಮರಿಸಿಕೊಂಡಿರುವ ಮೂವರ ಪತ್ತೆಗೆ ದಿಲ್ಲಿ ಪೊಲೀಸರು ಏನು ಕ್ರಮ ಕೈಗೊಂಡಿದ್ದಾರೆ,  ಮಾಹಿತಿ ಕೊಡಿ ಎಂದು ಕೇಳಿದ್ದಾಗ ಲೇ  ಕೇಂದ್ರ ಮಾಹಿತಿ ಆಯೊಗವು ಸಹ  ಸರ್ಕಾರದ ಮುಂದೆ ಈ ಮಾಹಿತಿಯನ್ನು ಇಟ್ಟಿದ್ದ ಬೆನ್ನಲ್ಲೇ  ಹತ್ಯೆಯ ಪ್ರಕರಣದಲ್ಲಿ  ತಲೆಮರಿಸಿಕೊಂಡಿರುವ ಅಪರಾಧಿಗಳ ವಿಚಾರಣೆಗೆ ಸರ್ಕಾರ ಆದೇಶ ನೀಡಿದೆ.

ಇನ್ನಾದರೂ ಮಹಾತ್ಮನ  ಪ್ರಕರಣಕ್ಕೆ  ಮುಕ್ತಿ ಸಿಗಲಿಯಾ? ತಲೆಮರಿಸಿಕೊಂಡಿರುವವರ ಕುರಿತು ಮಾಹಿತಿ ಸಿಗಲಿದೆಯೇ ಎಂದು ಕಾದು ನೋಡ ಬೇಕಿದೆ.

Follow Us:
Download App:
  • android
  • ios