ರೌಡಿ ನಾಗ ತನ್ನ ಹೆಸರಿನಲ್ಲಿರುವ ರೌಡಿಶೀಟರ್ ತೆಗೆಯಲು ಬಹಳ ಶ್ರಮಪಟ್ಟಿದ್ದ. ಕೋರ್ಟ್ ಮೆಟ್ಟಿಲೇರಿ ತನ್ನ ಹೆಸರ ಜೊತೆಗಿದ್ದ ಕಳಂಕವನ್ನು ನೀಗಿಸಿಕೊಂಡಿದ್ದ. ಅದಾದ ಬಳಿಕ ಸದ್ದಿಲ್ಲದೇ ಕಳ್ಳದಂಧೆಯಲ್ಲಿ ತೊಡಗಿಕೊಂಡು ತನ್ನ ವ್ಯವಹಾರ ವೃದ್ಧಿಸಿಕೊಂಡಿದ್ದನೆನ್ನಲಾಗಿದೆ.

ಬೆಂಗಳೂರು(ಏ. 14): ರೌಡಿಶೀಟರ್ ನಾಗನ ಮನೆಯಲ್ಲಿ ಪೊಲೀಸರು ದಾಳಿ ಮಾಡಿದ್ದು ರಾಜ್ಯವಷ್ಟೇ ಅಲ್ಲ ಇಡೀ ದೇಶದ ಗಮನ ಸೆಳೆದಿದೆ. ಹಳೆಯ ನೋಟುಗಳಿರುವ ಕೋಟ್ಯಂತರ ಮೌಲ್ಯದ ಹಣವು ಈತ ಮನೆಯಲ್ಲಿ ಪತ್ತೆಯಾಗಿದೆ. ಅನೇಕ ವರ್ಷಗಳಿಂದ ಮಾಜಿ ರೌಡಿಶೀಟರ್ ಎನಿಸಿದ್ದ ನಾಗ ಈಗ ಹಾಲಿ ರೌಡಿ ಎನಿಸಿದ್ದಾರೆ. ಪೊಲೀಸರು ಈತನನ್ನು ಮತ್ತೊಮ್ಮೆ ರೌಡಿಶೀಟ್'ಗೆ ಸೇರಿಸಿದ್ದಾರೆ. ಅಪಹರಣ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳ ಮೇಲೆ ನಾಗ ಮತ್ತೆ ರೌಡಿಶೀಟರ್ ಎನಿಸಿದ್ದಾನೆ. ರೌಡಿ ನಾಗನ ಹಲವು ಕಳ್ಳದಂಧೆಗಳಿಗೆ ಸಾಥ್ ನೀಡುತ್ತಿದ್ದ ಈತನ ಇಬ್ಬರು ಮಕ್ಕಳೂ ಕೂಡ ಮೊದಲಬಾರಿಗೆ ರೌಡಿಶೀಟರ್ಸ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಗಾಂಧಿ ಮತ್ತು ಶಾಸ್ತ್ರಿ:
ಅಂದಹಾಗೆ, ರೌಡಿ ನಾಗ ತನ್ನ ಇಬ್ಬರು ಮಕ್ಕಳಿಗೆ ಗಾಂಧಿ ಮತ್ತು ಶಾಸ್ತ್ರಿ ಎಂದಿಟ್ಟಿರುವುದು ಹಲವರ ಹುಬ್ಬೇರಿಸುವುದರಲ್ಲಿ ಅನುಮಾನವಿಲ್ಲ. ಮಕ್ಕಳು ಒಳ್ಳೆಯ ಹಾದಿ ತುಳಿಯುವ ಸದುದ್ದೇಶದಿಂದ ಈತ ಆ ಹೆಸರುಗಳನ್ನಿಟ್ಟಿದ್ದನೋ ಗೊತ್ತಿಲ್ಲ. ಆದರೆ, ಅವರಿಬ್ಬರು ಅಪ್ಪನ ರೌಡಿ ಮತ್ತು ಕಳ್ಳ ಸಾಮ್ರಾಜ್ಯಕ್ಕೆ ವಾರಸುದಾರರಾಗಲು ಯತ್ನಿಸಿರುವುದಂತೂ ಹೌದು. ಪೊಲೀಸರು ಗಾಂಧಿ ಮತ್ತು ಶಾಸ್ತ್ರಿ ವಿರುದ್ಧವೂ ರೌಡಿಶೀಟ್ ಓಪನ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಗಾಂಧಿ ಮತ್ತು ಶಾಸ್ತ್ರಿ ಅವರು ರೌಡಿ ಗಾಂಧಿ ಹಾಗೂ ರೌಡಿ ಶಾಸ್ತ್ರಿ ಎನಿಸಿದ್ದಾರೆ. ಗಾಂಧೀವಾದಿಗಳಿಗೆ ಇದನ್ನು ಸಹಿಸಿಕೊಳ್ಳಲು ಹೇಗೆ ಸಾಧ್ಯವಾದೀತು?