ಮಧ್ಯಪ್ರದೇಶ ಬಿಜೆಪಿ ಶಾಸಕರೊಬ್ಬರ ವಿರುದ್ಧ ಭಾರತೀಯ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಗರಂ ಆಗಿದ್ದಾರೆ.

ನವದೆಹಲಿ: ಮಧ್ಯಪ್ರದೇಶ ಬಿಜೆಪಿ ಶಾಸಕರೊಬ್ಬರ ವಿರುದ್ಧ ಭಾರತೀಯ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಗರಂ ಆಗಿದ್ದಾರೆ.

ವಿರಾಟ್ ಕೊಹ್ಲಿಯ ದೇಶಪ್ರೇಮವನ್ನು ಪ್ರಶ್ನಿಸಿದ ಬಿಜೆಪಿ ಶಾಸಕನ ಹೇಳಿಕೆಯನ್ನು ಅಸಂಬದ್ಧ ಹಾಗೂ ಪ್ರಚಾರ ಗಿಟ್ಟಿಸುವ ತಂತ್ರ ಎಂದು ಗಂಭೀರ್ ಬಣ್ಣಿಸಿದ್ದಾರೆ.

ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾ ಜೊತೆ ಇಟಲಿಯಲ್ಲಿ ವಿವಾಹವಾಗಿದ್ದನ್ನು ಮಧ್ಯಪ್ರದೇಶ ಬಿಜೆಪಿ ಶಾಸಕ ಪನ್ನಲಾಲ್ ಶಾಕ್ಯ ಟೀಕಿಸಿದ್ದರು.

ಕೊಹ್ಲಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ. ಕೋಟ್ಯಾಂತರ ಜನರು ಭಾರತೀಯರು ಅವರ ಅಭಿಮಾನಿಗಳಾಗಿದ್ದಾರೆ. ಆದರೆ ಕೊಹ್ಲಿ ತನ್ನ ವಿವಾಹ ಸಮಾರಂಭವನ್ನೇಕೆ ಭಾರತದಲ್ಲಿ ನಡೆಸಲಿಲ್ಲ? ಇದೇನಾ ರಾಷ್ಟ್ರಭಕ್ತಿ? ಎಂದು ಶಾಕ್ಯ ಪ್ರಶ್ನಿಸಿದ್ದರು.

ಶಾಕ್ಯ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಗಂಭೀರ್, ಇದು ಅಸಂಬದ್ಧ ಹೇಳಿಕೆ. ಇದು ಪ್ರತಿಯೊಬ್ಬರ ವೈಯುಕ್ತಿಕ ಆಯ್ಕೆಯ ವಿಚಾರ. ಕೆಲವರಿಗೆ ಪ್ರಚಾರದ ಗೀಳಿರುತ್ತದೆ. ವಿಶೇಷವಾಗಿ ರಾಜಕಾರಣಿಗಳು ಹೇಳಿಕೆಗಳನ್ನು ನೀಡುವ ಮುಂಚೆ ಬಹಳ ಜಾಗೃತರಾಗಿರಬೇಕು, ಎಂದು ಗಂಭೀರ್ ಎಎನ್ಐಗೆ ತಿಳಿಸಿದ್ದಾರೆ.

ಕಳೆದ ಡಿ.11ರಂದು ವಿರುಷ್ಕಾ ದಂಪತಿ ಇಟಲಿಯ ರೆಸಾರ್ಟ್’ವೊಂದರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು.