ಫ್ರಿಡ್ಜ್ ಇದ್ರೆ ರದ್ದಾಗುತ್ತಾ BPL ಕಾರ್ಡ್?ವಾಹನಕ್ಕೆ ತಬಲಾ, ಪಿಟೀಲು ಹಾರ್ನ್;ಸೆ.4ರ ಟಾಪ್ 10 ಸುದ್ದಿ!
ವಾಹನಗಳ ಕರ್ಕಶ ಶಬ್ದದ ಹಾರ್ನ್ ಬದಲು ಪಿಟೀಲು, ಕೊಳಲು ಹಾರ್ನ್ ಅಳವಡಿಸಲು ನಿತಿನ್ ಗಡ್ಕರಿ ಮುಂದಾಗಿದ್ದಾರೆ. ಟೇಬಲ್ ಟೆನಿಸ್ ಪಟು ಮನಿಕಾ ಬಾತ್ರಾ ಕೋಚ್ ವಿರುದ್ಧ ಫಿಕ್ಸಿಂಗ್ ಆರೋಪ ಮಾಡಿದ್ದಾರೆ. ಮನೆ ಖರೀದಿದಾರರಿಗೆ ರಾಜ್ಯ ಸರ್ಕಾರದಿಂದ ಕೊಡುಗೆ. ಕಿಚ್ಚ ಸುದೀಪ್ ಕಾರಲ್ಲಿ ಸದಾ ಇರುತ್ತೆ ಇಬ್ಬರ ಫೋಟೋ, ಬೈಕ್, ಟಿವಿ, ಫ್ರಿಡ್ಜ್ ಇದ್ರೆ ರದ್ದಾಗುತ್ತಾ ಬಿಪಿಎಲ್ ಕಾರ್ಡ್ ಸೇರಿದಂತೆ ಸೆಪ್ಟೆಂಬರ್ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಪೋರ್ನ್ ನೋಡಿ ಹೆಣ್ಮಕ್ಕಳ ಹತ್ಯೆ, ಲೈಂಗಿಕ ಕಾರ್ಯಕರ್ತರಲ್ಲಿ ಸಾವಿನ ಭಯ!
ಅಫ್ಘಾನಿಸ್ತಾನ ವಶಪಡಿಸಿಕೊಂಡ ಬಳಿಕ, ತಾಲಿಬಾನ್ ಹೋರಾಟಗಾರರು ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾರೆ. ಸದ್ಯ ತಾಲಿಬಾನಿಯರು ಪೋರ್ನ್ ಸೈಟ್‌ಗಳ ಮೂಲಕ ಅಫ್ಘಾನಿಸ್ತಾನದ ಲೈಂಗಿಕ ಕಾರ್ಯಕರ್ತರ ಹುಡುಕಾಟ ಆರಂಭಿಸಿದ್ದಾರೆ.
ಬರಾದರ್ ಆಫ್ಘನ್‌ನ ನೂತನ ಅಧ್ಯಕ್ಷ: ಮಹಿಳೆಯರಿಗೆ ಸರ್ಕಾರದಲ್ಲಿ ಸ್ಥಾನವಿಲ್ಲ!
ಅಷ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸರ್ಕಾರ ರಚನೆ ಪ್ರಕ್ರಿಯೆ ತುಸು ವಿಳಂಬಗೊಂಡಿದ್ದು, ಶುಕ್ರವಾರದ ಬದಲಿಗೆ ಶನಿವಾರ ರಚನೆಯಾಗಲಿದೆ. ಇದೇ ವೇಳೆ ತಾಲಿಬಾನಿ ಸಹ ಸಂಸ್ಥಾಪಕರಲ್ಲಿ ಒಬ್ಬನಾದ ಮುಲ್ಲಾ ಬರಾದರ್ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ವಾಹನಗಳಿಗೆ ಶೀಘ್ರ ತಬಲಾ, ಕೊಳಲು, ಪಿಟೀಲು ಹಾರ್ನ್: ಕರ್ಕಶ ಧ್ವನಿ ತಪ್ಪಿಸಲು ಗಡ್ಕರಿ ಪ್ಲಾನ್!
ವಾಹನಗಳ ಹಾರ್ನ್ ಮಾಡಿದಾಗ ಅದರಿಂದ ಹೊರಹೊಮ್ಮುವ ಕರ್ಕಶ ಧ್ವನಿಗೆ ಬೇಸರ ಪಡುವವರೇ ಹೆಚ್ಚು. ಆದರೆ ಮುಂದಿನ ದಿನಗಳಲ್ಲಿ ಇಂಥ ಕರ್ಣಕಠೋರ ಶಬ್ದಕ್ಕೆ ಬದಲಾಗಿ ಭಾರತೀಯ ಸಂಗೀತದ ವಾದ್ಯಗಳು ಕೇಳಿಬರುವ ಸಾಧ್ಯತೆ ಇದೆ! ಅಂದರೆ ತಬಲಾ, ಪಿಟೀಲು, ಕೊಳಲು ಸೇರಿದಂತೆ ನಾನಾ ವಾದ್ಯಗಳ ಮಧುರ ಧ್ವನಿ ಕೇಳಿಬರಲಿದೆ.
ಕೋಚ್ ಸೌಮ್ಯದೀಪ್ ಫಿಕ್ಸಿಂಗ್ ಮಾಡು ಎಂದಿದ್ದರು: ಮನಿಕಾ ಬಾತ್ರಾ ಅಚ್ಚರಿಯ ಹೇಳಿಕೆ!
ಟೋಕಿಯೋ ಒಲಿಂಪಿಕ್ಸ್ ಸ್ಪರ್ಧೆ ವೇಳೆ ರಾಷ್ಟ್ರೀಯ ಕೋಚ್ ಸಹಾಯ ನಿರಾಕರಿಸಿ ಸುದ್ದಿಯಾಗಿದ್ದ ಟೇಬಲ್ ಟೆನಿಸ್ ಪಟು ಮನಿಕಾ ಬಾತ್ರಾ, ‘ಕೋಚ್ ಸೌಮ್ಯದೀಪ್ ರಾಯ್ ಮ್ಯಾಚ್ ಫಿಕ್ಸಿಂಗ್ ಮಾಡಿದ್ದೇ ನನ್ನ ಈ ನಿರ್ಧಾರಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮನಿಕಾ ಬಾತ್ರಾ ಮೂರನೇ ಸುತ್ತು ಪ್ರವೇಶಿಸಿದ್ದರು. ಆದರೆ ಪದಕದ ಸುತ್ತು ಪ್ರವೇಶಿಸಲು ವಿಫಲರಾಗಿದ್ದರು.
ಕಿಚ್ಚ ಕಾರಲ್ಲಿ ತಪ್ಪದೇ ಈ ಎರಡು ಫೋಟೋಗಳನ್ನು ಇಡುತ್ತಾರಂತೆ!
50ರ ವಸಂತಕ್ಕೆ ಕಾಲಿಟ್ಟ ಸುದೀಪ್ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸುದೀಪ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ, ಕಿಚ್ಚ ಯಾವ ಕಾರ ಓಪನ್ ಮಾಡಿ ನೋಡದರೂ ತಂದೆ, ತಾಯಿ ಫೋಟೋ ಇಟ್ಟಿರುತ್ತಾರಂತೆ. ಅವರೇ ನನ್ನ ಮೊದಲ ದೇವರು ಎಂದು ಹೇಳಿದ್ದಾರೆ.
ಮನೆ ಖರೀದಿದಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ನಿವೇಶನ, ಮನೆ ಖರೀದಿದಾರರಿಗೆ ಸರ್ಕಾರ ಸಿಹಿ ಸುದ್ದಿ ನೀಡಲು ಮುಂದಾಗಿದ್ದು, ಕೋವಿಡ್‌ನಿಂದಾಗಿ ಆರ್ಥಿಕ ಚಟುವಟಿಕೆಗಳು ಕುಸಿದಿರುವ ಕಾರಣ ರಾಜ್ಯದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು ಪರಿಷ್ಕರಣೆ ಮಾಡಲು ತೀರ್ಮಾನಿಸಿದೆ.
ರಾಯಲ್ ಎನ್‌ಫೀಲ್ಡ್ ಹೊಸ ಕ್ಲಾಸಿಕ್ 350 ಬುಲೆಟ್ ಲಾಂಚ್
ಭಾರತೀಯ ರಸ್ತೆಗಳಲ್ಲಿ ಬಹು ಜನಪ್ರಿಯವಾಗಿರುವ ಬುಲೆಟ್ ದ್ವಿಚಕ್ರವಾಹನ ರಾಯಲ್ ಎನ್‌ಫೀಲ್ಡ್‌ನ ಹೊಸ ಕ್ಲಾಸಿಕ್ 350 ಲಾಂಚ್ ಆಗಿದೆ. ಮತ್ತಷ್ಟು ಆಧುನಿಕ ತಂತ್ರಜ್ಞಾನ ಹಾಗೂ ಸಾಕಷ್ಟು ಹೊಸ ಫೀಚರ್‌ಗಳಿಂದ ಈ ಬುಲೆಟ್ ಹೆಚ್ಚು ಗಮನ ಸೆಳೆಯುತ್ತದೆ. ಈಗಾಗಲೇ ಈ ಬುಕ್ಕಿಂಗ್ ಕೂಡ ಆರಂಭವಾಗಿದೆ.
IT ನಿಯಮದಡಿ 30 ಲಕ್ಷಕ್ಕೂ ಅಧಿಕ ಖಾತೆ ನಿಷೇಧಿಸಿದ ವಾಟ್ಸಾಪ್!
ಸಂದೇಶ ಸಂವಹನ ವೇದಿಕೆಗಳ ಪೈಕಿ ಅಗ್ರಗಣ್ಯ ಎನಿಸಿರುವ ಫೇಸ್‌ಬುಕ್ ಒಡೆತನದ ವಾಟ್ಸಾಪ್ 46 ದಿನಗಳಲ್ಲಿ 30 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಿದೆ.
ಬೈಕ್, ಟಿವಿ, ಫ್ರಿಡ್ಜ್ ಇದ್ದವರ BPL ಕಾರ್ಡ್ ರದ್ದಾಗುತ್ತಾ? ಇಲ್ಲಿದೆ ಇದರ ಸತ್ಯಾಸತ್ಯತೆ
ನಿಜವಾದ ಸುದ್ದಿಗಿಂತ ಸುಳ್ಳು ಸುದ್ದಿಯೇ ಬೇಗ ಎಲ್ಲರಿಗೂ ಮುಟ್ಟಿಬಿಡುತ್ತೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದ್ದೇ ಆಗಿದ್ದು. ಅಂತಹದ್ದೇ ಒಂದು ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಬಡ ಜನರ ಆತಂಕಕ್ಕೆ ಕಾರಣವಾಗಿದೆ.