ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭವಲ್ಲ?

Gadkari calls for stringent sanctioning of driving license
Highlights

ಚಾಲನಾ ಪರವಾನಿಗೆ ನೀಡುವ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಪಡಿಸಲು ಕೇಂದ್ರ ಸಾರಿಗೆ ಅಚಿವ ನಿತಿನ್ ಗಡ್ಕರಿ ಕರೆ ನೀಡಿದ್ದಾರೆ.

ನವದೆಹಲಿ: ಚಾಲನಾ ಪರವಾನಿಗೆ ನೀಡುವ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಪಡಿಸಲು ಕೇಂದ್ರ ಸಾರಿಗೆ ಅಚಿವ ನಿತಿನ್ ಗಡ್ಕರಿ ಕರೆ ನೀಡಿದ್ದಾರೆ.

ಭಾರತದಲ್ಲಿ ಆರ್’ಟಿಓ ಮೂಲಕ ನೀಡಲಾಗಿರುವ ಶೇ.30 ಲೈಸೆನ್ಸ್’ಗಳು ಬೋಗಸ್ ಆಗಿವೆ.  ಆದುದರಿಂದ ಭ್ರಷ್ಟಾಚಾರ-ಮುಕ್ತ ವ್ಯವಸ್ಥೆಯ ಅಗತ್ಯವಿದೆ.  ದೇಶಾದ್ಯಂತ 2000 ಚಾಲನಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಕಂಪ್ಯೂಟರಿಕೃತ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ 3 ದಿನಗಳಲ್ಲಿ ಲೈಸೆನ್ಸ್ ಸಿಗುವುದು, ಎಂದು ಎಎನ್’ಐಗೆ ತಿಳಿಸಿದ್ದಾರೆ.

ಜೊತೆಗೆ, ಸಾರಿಗೆ ನಿಯಮಗಳನ್ನು ಉಲ್ಲಂಘಿಸುವವರ  ವಿರುದ್ಧ ತಕ್ಷಣ ಕ್ರಮಕೈಗೊಳ್ಳಲಾಗುವಂತಹ ವ್ಯವಸ್ಥೆಯನ್ನು ನಾವು ರೂಪಿಸಬಯಸುತ್ತೇವೆ.  ಯಾರಾದರೂ ನಿಯಮ ಉಲ್ಲಂಘಿಸಿದರೆ, ತಕ್ಷಣ ದಂಡದ ಚಲನ್ ಅವರ ಮನೆಗೆ ತಲುಪುವಂತಾಗಬೇಕು, ಎಂದು ಗಡ್ಕರಿ ಹೇಳಿದ್ದಾರೆ.

loader