ಒಂದು ರೀತಿ ಜಿಲ್ಲಾ ಆಸ್ಪತ್ರೆ ಆಡಳಿತ ಕುಸಿದಿದ್ದು, ಬಡವರ ಜೀವದ ಜೊತೆ ವೈದ್ಯರು ಚಲ್ಲಾಟವಾಡುತ್ತಿರುವಂತಿದೆ. ಇದೊಂದೇ ಪ್ರಕರಣವಲ್ಲ ಒಂದು ವರ್ಷದಲ್ಲಿ ಇಂತಹ ನಾಲ್ಕೈದು ಪ್ರಕರಣಗಳು ನಡೆದರೂ ಎಚ್ಚೆತ್ತುಕೊಳ್ಳದ ಆಡಳಿತದ ವ್ಯವಸ್ಥೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಗದಗ (ಮಾ.31): ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಕಣ್ಣೀರಿನ ಕಥೆ ಮುಂದುವರೆದಿದೆ. ಬಾಣಂತಿಯರ ಪಾಲಿಗೆ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗವೇ ಒಂದು ರೀತಿಯ ನರಕವಾಗಿದೆ.
ನರಸಾಪೂರ ಕಾಲೋನಿಯ ನಿವಾಸಿ ಶರೀಫ್ ಬಿ ಕಳೆದ ಶುಕ್ರವಾರದಂದು ಸಿಜರಿಯನ್ ಹೆರಿಗೆಯಾಗಿದೆ. ಹೆರಿಗೆಯಾಗಿ ಐದಾರು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರೂ, ಯಾವೊಬ್ಬ ವೈದ್ಯರು ಬಾಣಂತಿಯ ಯೋಗಕ್ಷೇಮ ನೋಡಿಕೊಂಡಿಲ್ಲ ಅಂತ ಬಾಣಂತಿ ಕಣ್ಣಿರಿಡುತ್ತಿದ್ದಾಳೆ.
ಹೊಟ್ಟೆನೋವು ತಾಳಲಾರದೆ ಹಗಲು ರಾತ್ರಿ ಕಣ್ಣಿರು ಹಾಕಿದರೂ ವೈದ್ಯರು ಕರುಣೆ ತೋರದಿರುವುದು ವಿಪರ್ಯಾಸ. ಅಷ್ಟೇ ಅಲ್ಲ ಹಿಮೋಗ್ಲೋಬಿನ್, ರಕ್ತದ ಅಂಶ ಕಡಿಮೆ ಇದೆ ಅಂತ ಬಾಣಂತಿ ಸಹೋದರನಿಂದ ರಕ್ತಪಡೆದು ಇನ್ನುವರೆಗೂ ಹಾಕದೆ ಇರುವುದಕ್ಕೆ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.