Asianet Suvarna News Asianet Suvarna News

ಸಚಿವರಿಗೆ ಪತ್ರ ಬರೆದು ಪರಮೇಶ್ವರ್ ತಿಳಿಸಿದ್ದೇನು..?

ಕಾಂಗ್ರೆಸ್ ಸಚಿವರಿಗೆ ವೈಯಕ್ತಿಕವಾಗಿ  ಪತ್ರ ಬರೆದಿರುವ ಉಪ ಮುಖ್ಯಮಂತ್ರಿ ಜಿ.  ಪರಮೇಶ್ವರ್ ಕೆಲ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಇಲಾಖಾವಾರು ಬೇಡಿಕೆಗೆ ಅನುಗುಣವಾಗಿ ಮಹತ್ವದ ಚರ್ಚೆ ನಡೆಯುತ್ತಿದ್ದರೂ, ಗೈರು ಹಾಜರಾಗುತ್ತಿರುವ ಸಚಿವರ ಬಗ್ಗೆ ಉಪಮುಖ್ಯ ಮಂತ್ರಿ ಡಾ.ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

G Parameshwar Wright Letters To Ministers

ಬೆಂಗಳೂರು : ಬಜೆಟ್ ಅಧಿವೇಶನದಲ್ಲಿ ಇಲಾಖಾವಾರು ಬೇಡಿಕೆಗೆ ಅನುಗುಣವಾಗಿ ಮಹತ್ವದ ಚರ್ಚೆ ನಡೆಯುತ್ತಿದ್ದರೂ, ಗೈರು ಹಾಜರಾಗುತ್ತಿರುವ ಸಚಿವರ ಬಗ್ಗೆ ಉಪಮುಖ್ಯ ಮಂತ್ರಿ ಡಾ.ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಡ್ಡಾಯವಾಗಿ ಕಲಾಪದಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಸಚಿವರಿಗೆ ಪತ್ರ ಬರೆದಿದ್ದಾರೆ. 

ಶನಿವಾರ ಎಲ್ಲ ಕಾಂಗ್ರೆಸ್ ಸಚಿವರಿಗೂ ವೈಯಕ್ತಿಕವಾಗಿ ಪತ್ರ ಬರೆದಿರುವ ಪರಮೇ ಶ್ವರ್, ಸದನದಲ್ಲಿ ಇಲಾಖಾವಾರು ಬೇಡಿಕೆಗೆ ಅನುಗುಣವಾಗಿ ಮಹತ್ವದ ಚರ್ಚೆಗಳು ನಡೆಯುತ್ತಿವೆ. ಇಂತಹ ವೇಳೆಯಲ್ಲಿ ಕೆಲವು ಸಚಿವರು ಗೈರು ಹಾಜರಾಗುತ್ತಿರುವ ಬಗ್ಗೆ ವಿಧಾನಸಭೆ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸಭಾಪತಿಗಳು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. 

ಆದರೂ ಸಚಿವರು ಗೈರು ಹಾಜರಾಗುವುದನ್ನು ಮುಂದುವರೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಸಮ್ಮಿಶ್ರ ಸರ್ಕಾರದ ನಮ್ಮ ಸಚಿವರುಗಳಿಂದ ಸಮರ್ಪಕ ಕಾರ್ಯ ಮತ್ತು ಕ್ರಿಯಾಶೀಲತೆಯನ್ನು ಎಐಸಿಸಿ ವರಿಷ್ಠರು ಬಯಸುತ್ತಾರೆ. ಹೀಗಾಗಿ ಸಚಿವರು ಸದನದಲ್ಲಿ ಸದಸ್ಯರುಗಳು ಪ್ರಸ್ತಾಪಿಸಿದ ವಿಷಯಗಳು, ಮಂಡಿಸಬೇಕಾದ ಕಾಗದ ಪತ್ರಗಳು, ಸದಸ್ಯರುಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಒದಗಿಸಬೇಕು. ಜತೆಗೆ ಉಭಯ ಸದನಗಳ ಕಾರ್ಯ ಕಲಾಪಗಳಿಗೆ ನಿಯೋಜ ನೆಗೊಂಡ ಸಚಿವರುಗಳು ಸದನಗಳಲ್ಲಿ ನಿಗದಿತ ಕಾರ್ಯ ಕಲಾಪ ಹಾಗೂ ಚರ್ಚೆಯಲ್ಲಿ ಸಕ್ರಿಯವಾಗಿ ಹಾಜರಿರಬೇಕು ಎಂದು ಪತ್ರದಲ್ಲಿ ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios