ಬಿಟ್’ಕಾಯಿನ್’ನಂಥ  ಕ್ರಿಪ್ಟೊಕರೆನ್ಸಿ ಬಳಕೆದಾರರಿಗೆ ಇಂದಿನ ಬಜೆಟ್’ನಲ್ಲಿ ಜೇಟ್ಲಿ  ಬಿಸಿ ಮುಟ್ಟಿಸಿದ್ದಾರೆ

ಬೆಂಗಳೂರು: ತಂತ್ರಜ್ಞಾನದ ಪ್ರಗತಿಯೊಂದಿಗೆ ಕ್ರಿಪ್ಟೊಕರೆನ್ಸಿ ಬಳಕೆ ಹಾಗೂ ಅವುಗಳಲ್ಲಿ ಹಣ ಹೂಡುವವರ ಸಂಖ್ಯೆಯು ಇತ್ತೀಚೆಗೆ ಹೆಚ್ಚಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಬಿಟ್’ಕಾಯಿನ್’ನಂಥ ಕ್ರಿಪ್ಟೊಕರೆನ್ಸಿ ಬಳಕೆದಾರರಿಗೆ ಇಂದಿನ ಬಜೆಟ್’ನಲ್ಲಿ ಬಿಸಿ ಮುಟ್ಟಿಸಿದ್ದಾರೆ. ಕ್ರಿಪ್ಟೊಕರೆನ್ಸಿಗಳ ಬಗ್ಗೆ ಹಣಕಾಸು ಸಚಿವರ ಅಭಿಪ್ರಾಯ ಇಲ್ಲಿದೆ;

  • ಭಾರತದ ಆರ್ಥಿಕತೆಯಲ್ಲಿ ಕ್ರಿಪ್ಟೊಕರೆನ್ಸಿಗೆ ಯಾವುದೇ ಸ್ಥಾನವಿಲ್ಲ
  • ಕ್ರಿಪ್ಟೊಕರೆನ್ಸಿಗಳ ಬಳಕೆಯನ್ನು ನಿರ್ಮೂಲನ ಮಾಡುವ ನಿಟ್ಟಿನಲ್ಲಿ ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.
  • ಕ್ರಿಪ್ಟೊಕರೆನ್ಸಿಗಳು ಅಕ್ರಮ ವ್ಯವಹಾರಗಳಿಗೆ ಬಳಕೆಯಾಗುತ್ತಿದೆ.
  • ಕ್ರಿಪ್ಟೊಕರೆನ್ಸಿಗಳಿಗೆ ಭಾರತದಲ್ಲಿ ಕಾನೂನಾತ್ಮಕ ಮಾನ್ಯತೆಯಿಲ್ಲ.
  • ಕ್ರಿಪ್ಟೊಕರೆನ್ಸಿಗಳು ವಂಚಕ ಯೋಜನೆಗಳಿದ್ದಂತೆ, ಹಣ ಹೂಡುವವರು ಅದರ ಬಗ್ಗೆ ಎಚ್ಚರವಹಿಸಬೇಕು.