ಸಿಎಂ ಸಿದ್ದರಾಮಯ್ಯ ಇಂದು ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬೆಲೆ ಗ್ರಾಮದ ಬೀರ ದೇವರ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದರು. ಶುಭ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ಇವತ್ತಿನ ಪ್ರವಾಸದಲ್ಲಿ ಅಶುಭ ಎನ್ನುವಂತಹ ಘಟನೆಗಳು ನಡೆದಿದ್ದೇ ಹೆಚ್ಚು.
ಚಿಕ್ಕಬಳ್ಳಾಪುರ (ಅ.30): ಸಿಎಂ ಸಿದ್ದರಾಮಯ್ಯ ಇಂದು ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬೆಲೆ ಗ್ರಾಮದ ಬೀರ ದೇವರ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದರು. ಶುಭ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ಇವತ್ತಿನ ಪ್ರವಾಸದಲ್ಲಿ ಅಶುಭ ಎನ್ನುವಂತಹ ಘಟನೆಗಳು ನಡೆದಿದ್ದೇ ಹೆಚ್ಚು.
ಸುದ್ದಿಗೋಷ್ಠಿ ವೇಳೆ ಅಲ್ಲೆ ಹಾಕಿದ್ದ ಬ್ಯಾರಿಕೇಡ್’ಗೆ ಸಿಎಂ ಪಂಚೆ ಸಿಕ್ಕಿ ಹಾಕಿಕೊಂಡ್ತು. ಪಂಚೆ ಬಿಡಿಸಿಕೊಳ್ಳಲು ಸಿಎಂ ಪರದಾಡಿದರು.
ಸಿಎಂ ಕಾರ್ಯಕ್ರಮದ ವೇಳೆಯೇ ಮತ್ತೊಂದು ಅವಘಡ ನಡೆಯಿತು .ಸಿಎಂ ಬೆಂಗಾವಲು ವಾಹನ- ಆಂಬುಲೆನ್ಸ್ ಮತ್ತು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಕಾರುಗಳ ನಡುವೆ ಸರಣಿ ಅಪಘಾತವೂ ನಡೆಯಿತು. ಅಪಘಾತದ ನಂತರ ಕಾಂಗ್ರೆಸ್ ಕಾರ್ಯಕರ್ತರು ಕಾರನ್ನ ತಳ್ಳಿಕೊಂಡು ಹೋದ ಪ್ರಸಂಗವೂ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನ ಸಿದ್ಧರಾಮಯ್ಯನವರು ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್ ಕೈ ಕೊಟ್ಟಿತ್ತು. ತಾಂತ್ರಿಕ ಕಾರಣದಿಂದಾಗಿ ಹೆಲಿಕಾಪ್ಟರ್ ಹಾರದೇ ಕೆಲಹೊತ್ತು ಆತಂಕ ಸೃಷ್ಠಿಸಿತ್ತು. ಒಟ್ಟಾರೆ ಶುಭ ಕಾರ್ಯಕ್ರಮಕ್ಕೆ ತೆರಳಿದ್ದ ಮುಖ್ಯಮಂತ್ರಿಗಳಿಗಿಂದು ಬರೀ ಅಶುಭಗಳೇ ನಡೆದವು.
