ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹುಟ್ಟಿದ್ದು ಮಂಡ್ಯ ಜಿಲ್ಲೆಯ, ಮೇಲುಕೋಟೆಯಲ್ಲಿ. ಜಯಾ ಜನಿಸಿದ್ದು ಮಂಡ್ಯಂ ಅಯ್ಯಂಗಾರ್ ಪಂಗಡದಲ್ಲಿ, ಈ ಪಂಗಡದವರು ಶ್ರೀ ವೈಷ್ಣವ ಸಿದ್ಧಾಂತ ಸಂಪ್ರದಾಯದ ಅನುಯಾಯಿಗಳಾಗಿರುತ್ತಾರೆ. ಈ ಸಿದ್ಧಾಂತದ ಆಚರಣೆ ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ.
ಚೆನ್ನೈ(ಡಿ.06): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹುಟ್ಟಿದ್ದು ಮಂಡ್ಯ ಜಿಲ್ಲೆಯ, ಮೇಲುಕೋಟೆಯಲ್ಲಿ. ಜಯಾ ಜನಿಸಿದ್ದು ಮಂಡ್ಯಂ ಅಯ್ಯಂಗಾರ್ ಪಂಗಡದಲ್ಲಿ, ಈ ಪಂಗಡದವರು ಶ್ರೀ ವೈಷ್ಣವ ಸಿದ್ಧಾಂತ ಸಂಪ್ರದಾಯದ ಅನುಯಾಯಿಗಳಾಗಿರುತ್ತಾರೆ. ಈ ಸಿದ್ಧಾಂತದ ಆಚರಣೆ ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ.
ಗರುಡ ಪುರಾಣದ ಶ್ರೀ ವೈಷ್ಣವ ಸಿದ್ಧಾಂತದ ಪ್ರಕಾರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು
ಹಿಂದೂ ಸಂಪ್ರದಾಯದಲ್ಲಿ ಚಿತೆಗೆ ಬೆಂಕಿ ಸ್ಪರ್ಶ ಮತ್ತು ಮಣ್ಣು ಮಾಡುವ ಎರಡು ಪದ್ಧತಿಗಳಿವೆ. ಮಂಡ್ಯಂ ಅಯ್ಯಂಗಾರಿಗಳ ಸಂಪ್ರದಾಯದ ಪ್ರಕಾರ ಮೃತ ದೇಹಕ್ಕೆ ಅಗ್ನಿ ಸ್ಪರ್ಶವಾಗಬೇಕು.
ಸಂಸ್ಕಾರದ ರೀತಿ ನೀತಿಗಳು
ಮೊದಲು ಶರೀರಕ್ಕೆ ಸ್ನಾನ ಮಾಡಿಸಿ ದೇಹ ಶುದ್ಧಿಯನ್ನು ಮಾಡಬೇಕು. ಬಳಿಕ ದೇಹದ ಮುಂದೆ ಶಾಂತಿ ಹೋಮ ಮಾಡಬೇಕು. ದಕ್ಷಿಣಾಯಣ ಪುಣ್ಯಕಾಲದಲ್ಲಿ ಸಾವು ಬಂದಿರುವುದರಿಂದ ದಾನ ಧರ್ಮ ಮಾಡಬೇಕು. ದೀರ್ಘ ಕಾಲ ಆಸ್ಪತ್ರೆಯಲ್ಲಿದ್ದು ನಾನಾ ವಿಧದ ಕ್ಲೇಷ ಅನುಭವಿಸಿರುವುದರಿಂದ ದೇಹಕ್ಕೆ ಉಂಟಾದ ನೊವು ಆತ್ಮಕ್ಕೆ ಉಂಟಾಗಬಾರದು. ಹೀಗಾಗಿ ಪಾರ್ಥೀವ ಶರೀರದ ಮುಂದೆ ಶಾಂತಿ ಕಾರ್ಯ ಮಾಡಬೇಕು. ಶರೀರ ಪಂಚಭೂತಗಳಲ್ಲಿ ಲೀನವಾಗಬೇಕು, ಅಂಗಭೇದವಾಗಬಾರದು.
ಶರೀರಕ್ಕೆ ಶ್ರೀ ಚೂರ್ಣ ಪರಿಪಾಲನಾ ಮಾಡಬೇಕು. ದಿವ್ಯದೇಶಗಳ ಎಲ್ಲಾ ಬ್ರಾಹ್ಮಣರು ಸೇರಿ ಆತ್ಮಕ್ಕೆ ಮೋಕ್ಷ ಕೋರಬೇಕು. ಮೇಲುಕೋಟೆ, ತಿರುಪತಿ, ಕಾಂಚಿಪುರಗಳು ದಿವ್ಯದೇಶಗಳಾಗಿವೆ. ಇಲ್ಲಿನ ಬ್ರಾಹ್ಮಣರು ಜಯಲಲಿತಾ ಆತ್ಮಕ್ಕೆ ಮೋಕ್ಷ ಕೋರಿ, ಶಾಂತಿ ಹೋಮ ಮಾಡಬೇಕು. ಒಂದು ಕೈಯಲ್ಲಿ ತಿರುನಾಮ, ಮತ್ತೊಂದು ಕೈಯಲ್ಲಿ ಕುಂಕುಮ ಚೂರ್ಣ ಹಿಡಿದು ನಾಮ ಧರಿಸಿ ಮಹಾವಿಷ್ಣು ಮತ್ತು ಲಕ್ಷ್ನಿಯನ್ನ ಆವಾಹನೆ ಮಾಡಬೇಕು ಹಾಗೂ 16 ಕಲಶ ಸ್ಥಾಪನೆ ಮಾಡಿ, 16 ದೇವತೆಗಳನ್ನ ಆವಾಹನೆ ಮಾಡಬೇಕು. ಶುದ್ಧಿಯಾದ ಶರೀರಕ್ಕೆ ನಾಮಧಾರಣೆ ಮಾಡಬೇಕು
ಶರೀರ ತ್ಯಾಗದ ಬಳಿಕ ಆತ್ಮಕ್ಕೆ ನೋವುಂಟಾಗದೇ ಸ್ವರ್ಗವಾಸಿಯಾಗಬೇಕೆಂದರೆ ಜಯಲಲಿತಾ ಹೆಸರಿನಲ್ಲಿ ಗೋದಾನ ಮಾಡಬೇಕು ಅಥವಾ ಭೂದಾನ ಇಲ್ಲವೇ ಹಣ ದಾನ ಮಾಡಬೇಕು. ಶ್ರೀಗಂಧದ ಕಟ್ಟಿಗೆಗಳಿಂದ ಚಿತೆ ಏರ್ಪಾಡು ಮಾಡಬೇಕು. ಸ್ವಂತ ಮಕ್ಕಳು ಇಲ್ಲದ್ದರಿಂದ ದತ್ತು ಮಕ್ಕಳು ಅಥವಾ ಪ್ರೀತಿ ಪಾತ್ರರು ಸಂಸ್ಕಾರ ಮಾಡಬಹುದು. ಸಂಬಂಧಿ ಅಲ್ಲದವರಿಗೆ ಸಂಸ್ಕಾರ ಮಾಡಿದಂತವರಿಗೆ ಅಶ್ವಮೇಧ ಫಲ ಪ್ರಾಪ್ತಿಯಾಗುವುದು
ಸಂಸ್ಕಾರದ ನಂತರದ ವಿಧಿ ವಿಧಾನಗಳು
ಸತ್ತ ದಿನದಿಂದ 13 ನೇ ದಿನದವರೆಗೂ ಪಿಂಡ ಪ್ರದಾನ ಮಾಡಬೇಕು. 10 ನೇ ದಿನಕ್ಕೆ ಆತ್ಮದ ಪೂರ್ಣ ಸ್ವರೂಪವಾಗುತ್ತದೆ. 12 ನೇ ದಿನಕ್ಕೆ ಸಹ ಪಿಂಡತ್ವ ಪೂರ್ಣಗೊಂಡು ಪಿತೃಲೋಕಕ್ಕೆ ಆತ್ಮ ಸೇರ್ಪಡೆಯಾಗುತ್ತದೆ. 12ನೇಯ ದಿನ ಆತ್ಮತೃಪ್ತಿಗಾಗಿ ಪಿಂಡ ಪ್ರದಾನ ಮಾಡುವ ಕಡೆಯ ದಿನ. 13 ದಿನಗಳ ಕಾಲ ಪ್ರತೀ ದಿನ ಒಂದೊಂದು ಪಿಂಡ ಪ್ರದಾನ ಮಾಡಬೇಕು. ಅನ್ನಾದಿ, ಜಲೋಧಕ, ತಿಲೋಧಕ, ವಾಸೋಧಕಗಳನ್ನು ಪ್ರದಾನ ಮಾಡಬೇಕು ಹಾಗೂ ಆತ್ಮ ಸದ್ಗತಿಗಾಗಿ ಹಾಲು-ತುಪ್ಪ ಪ್ರಧಾನ ಮಾಡಬೇಕು.
ಶ್ರಾದ್ಧ ಪ್ರಧಾನದ ಬಗ್ಗೆ ಮಾಹಿತಿ
ವಿವಾಹಿತರಾಗಿ ಮರಣ ಹೊಂದಿದವರಿಗೆ ಪ್ರತೀ ವರ್ಷ ಶ್ರಾದ್ಧ ಮಾಡಬೇಕಾಗುತ್ತದೆ. ಆದರೆ ಜಯಲಲಿತಾ ಅವಿವಾಹಿತರಾದ್ದರಿಂದ ಆತ್ಮಶಾಂತಿಗೆ ನಾರಾಯಣ ಬಲಿ ಮಾಡುವುದು ಉತ್ತಮ. ಒಂದು ವೇಳೆ ಸಂಬಂಧಿಗಳು ಪ್ರತೀ ವರ್ಷ ಶ್ರಾದ್ಧ ಮಾಡಲು ಸಿದ್ಧವಿದ್ದರೇ ಒಳ್ಳೆಯದು. ಇಲ್ಲವಾದಲ್ಲಿ ಒಮ್ಮೆ ನಾರಾಯಣ ಬಲಿ ಅಥವಾ ಗಯಾ ಶ್ರಾದ್ಧ ಮಾಡಬೇಕು.
ನಾರಾಯಣ ಬಲಿಯ ಪ್ರಕಾರ ಪೂಜಾ ಹವನ ಮಾಡಿ 12 ಜನ ಬ್ರಾಹ್ಮರಿಗೆ ಒಮ್ಮೆಲೆ ಅನ್ನ ಪ್ರದಾನ ಮಾಡಬೇಕು. 16 ವರ್ಷ ಮೇಲ್ಪಟ್ಟ ಅವಿವಾಹಿತರು ಶ್ರೀಮತಿಯ ಸಮಾನ. ಆದ್ದರಿಂದ ಪ್ರತೀ ವರ್ಷ ಸಪಿಂಡೀಕರಣ(ಪಿಂಡ ಪ್ರಧಾನ ಅಥವಾ ಶ್ರಾದ್ಧ) ಮಾಡಲೇಬೇಕು. ಆತೃಪ್ತ ಆತ್ಮದ ಕನ್ಮ ನಿವಾರಣೆಗಾಗಿ ವೃಷಭ(ಗೋವು)ನ್ನು ದಾನ ಮಾಡಬೇಕು.
ಪ್ರತೀ ವರ್ಷ ಶ್ರಾದ್ಧಾ ಸಾದ್ಯವಿಲ್ಲದಿದ್ದರೇ?
ಜಯಲಲಿತಾರಿಗೆ ಸ್ವಂತ ಮಕ್ಕಳು ಇಲ್ಲದ ಕಾರಣ ಪ್ರತೀವರ್ಷ ಶ್ರಾದ್ಧ ಸಾಧ್ಯವಾಗದಿದ್ದರೆ, ನಾರಾಯಣ ಬಲಿ ಅಥವಾ ಗಯಾ ಶ್ರಾದ್ಧ ಮಾಡುವುದು ಉತ್ತಮ. ನಾರಾಯಣ ಬಲಿ ಕೇವಲ ಒಂದು ಬಾರಿ ಮಾಡುವ ಶ್ರಾದ್ಧ ಹೀಗಾಗಿ ದತ್ತು ಮಕ್ಕಳು ಅಥವಾ ಪ್ರೀತಿ ಪಾತ್ರರು ಈ ಗಯಾ ಶ್ರಾದ್ಧವನ್ನು ಆಚರಿಸಬಹುದು.
ಗಯಾ ಶ್ರಾದ್ಧ ವಿಧಿ ವಿಧಾನ
ಗಯಾ ಶ್ರಾದ್ಧಾವನ್ನು ವಿಷ್ಣುಗಯೆಯ ಫಲ್ಗುಣಿ ನದಿ ದಡದಲ್ಲಿ ಆಚರಿಸಬೇಕು ಹಾಗೂ ಫಲ್ಗುಣಿ ದಡದ ಅರಳಿ ಮರದ ಕೆಳಗೆ ಅಕ್ಷಯ ಪಿಂಡ ಪ್ರದಾನ ಮಾಡಬೇಕು. ಇಲ್ಲಿ ಒಮ್ಮೆ ಪಿಂಡ ಪ್ರಧಾನ ಮಾಡಿ ಅನ್ನದಾನ ಮಾಡಿದರೆ ಸಹಸ್ರ ವರ್ಷಗಳ ಆಚರಣೆಗೆ ಸಮ. ಜಯಲಲಿತಾ ನಿತ್ಯ ಅನ್ನದಾನ ಮಾಡುವುದರ ಮೂಲಕ ವಿಷ್ಣುವಿನ ಪ್ರೀತಿಗರ ಪಾತ್ರರಾಗಿದ್ದಾರೆ. ವಿಷ್ಣು ಪ್ರೀತಿಗೆ ಪಾತ್ರರಾದವರು ಶರೀರ ಇರುವಾಗಲೇ ಕಷ್ಟ ಅನುಭವಿಸಿ, ಸಾವಿನ ನಂತರ ಸ್ವರ್ಗ ವಾಸಿಗಳಾಗುತ್ತಾರೆ. ವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾದ್ರೆ ಮೋಕ್ಷ ಪ್ರಾಪ್ತಿಯಾಗುತ್ತದೆ.
