ಸಿಎಂ ಅಧಿಕಾರವಧಿ ಗೊಂದಲ ಇನ್ನಷ್ಟು ಜಟಿಲ

First Published 28, May 2018, 8:46 AM IST
Full 5-year term for Kumaraswamy still not discussed Says Siddaramaiah
Highlights

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಅಧಿಕಾರಾವಧಿ ಕುರಿತ ಗೊಂದಲ ಮತ್ತಷ್ಟು ಜಟಿಲಗೊಂಡಿದೆ. 
 

ನವದೆಹಲಿ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಅಧಿಕಾರಾವಧಿ ಕುರಿತ ಗೊಂದಲ ಮತ್ತಷ್ಟು ಜಟಿಲಗೊಂಡಿದೆ. ಒಂದು ಕಡೆ ಕುಮಾ ರಸ್ವಾಮಿ ಅವರು ಮುಂದಿನ ಐದು ವರ್ಷ ತಾವೇ ಪೂರ್ಣಾವಧಿ  ಮುಖ್ಯಮಂತ್ರಿ ಎಂದು ಹೇಳುತ್ತಿದ್ದರೆ, ಇನ್ನೊಂದು ಕಡೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಚರ್ಚೆಯೇ ಆಗಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. 

‘ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುವರೇ’ ಎಂದು ಭಾನುವಾರ ದೆಹಲಿಯಲ್ಲಿ ಪ್ರತ್ರಕರ್ತರು ಕೇಳಿದ ಪ್ರಶ್ನೆಗೆ, ಇದುವರೆಗೂ ಆ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು  ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಅಧಿಕಾರಾವಧಿ ಕುರಿತ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಹಾಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕೂಡ ಇದೇ ಅರ್ಥ ದಲ್ಲಿ ಹೇಳಿಕೆ ನೀಡಿದ್ದರು. 

‘ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತಾರಾ ಎನ್ನುವ ವಿಚಾರ ಇನ್ನೂ ಅಂತಿಮಗೊಂಡಿಲ್ಲ. ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಈ ಕುರಿತು ಜೆಡಿಎಸ್‌ನೊಂದಿಗೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು’ ಎಂದು ಪರಮೇಶ್ವರ್ ಹೇಳಿದ್ದರು. ಇದಕ್ಕೂ ಮೊದಲು ತಮಿಳುನಾ ಡಿನ ಶ್ರೀರಂಗಂಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅವರು, ‘ಐದು ವರ್ಷದ ಅವಧಿಗೆ ನ ಆನೇ ಪೂರ್ಣಾವಧಿ ಸಿಎಂ’ ಎಂದಿದ್ದರು. 

loader