ನವದೆಹಲಿ : ಕೆಲ ದಿನಗಳ ಹಿಂದೆ ದಿನದಿನಕ್ಕೂ ಏರಿಕೆಯಾಗಿ ಜನರಿಗೆ ಶಾಕ್ ನೀಡಿದ್ದ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆಯಾಗುತ್ತಿದೆ. ಇದರಿಂದ ವಾಹನ ಸವಾರರು ಕೊಂಚ ನಿರಾಳರಾಗಿದ್ದಾರೆ.

ಇಂದು ದೇಶದ ಅನೇಕ ಕಡೆ ತೈಲ ದರದಲ್ಲಿ ಕೆಲ ಪೈಸೆಯಷ್ಟು ಇಳಿಕೆ ಕಂಡು ಬಂದಿದೆ.  ಪ್ರತೀ ಲೀಟರ್ ಪೆಟ್ರೋಲ್ ದರವು ಮೆಟ್ರೋ ಸಿಟಿಗಳಲ್ಲಿ 9 ರಿಂದ 13 ಪೈಸೆವರೆಗೆ ಇಳಿಕೆ ಕಂಡು ಬಂದಿದೆ. 

ಕೋಲ್ಕತಾ, ಮುಂಬೈನಲ್ಲಿ ದರವು 13 ಪೈಸೆ ಇಳಿದರೆ,  ಚೆನ್ನೈನಲ್ಲಿ  9 ಪೈಸೆ ಇಳಿದೆ.  ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ದರವು 75.93 ರು.ಗಳಾಗಿದೆ. 

ಇನ್ನು ಮೆಟ್ರೋ ಸಿಟಿಗಳಲ್ಲಿ ಡೀಸೆಲ್ ದರದಲ್ಲಿಯೂ ಕೂಡ ಇಳಿಕೆ ಕಂಡು ಬಂದಿದ್ದು,  7 ರಿಂದ  12 ಪೈಸೆಯಷ್ಟು ಇಳಿದಿದೆ. ಇದರಿಂದ 71.80 ರು.ಗಳಾಗಿದೆ.