Asianet Suvarna News Asianet Suvarna News

ಭರ್ಜರಿ ಗುಡ್ ನ್ಯೂಸ್ : ಮತ್ತೆ ಇಳಿದ ಪೆಟ್ರೋಲ್, ಡೀಸೆಲ್ ಬೆಲೆ

ನಿರಂತರ ಏರಿಕೆ ಮೂಲಕ ಜನರಿಗೆ ತಲೆನೋವು ತಂದಿಟ್ಟಿದ್ದ ಪೆಟ್ರೋಲ್  ಡೀಸೆಲ್ ದರ ಇದೀಗ ಸತತವಾಗಿ ಇಳಿಕೆಯಾಗುವ ಮೂಲಕ ವಾಹನ ಸವಾರರಿಗೆ ರಿಲೀಫ್ ನೀಡಿದೆ.

Fuel prices slashed for fifth day
Author
Bengaluru, First Published Oct 22, 2018, 1:15 PM IST
  • Facebook
  • Twitter
  • Whatsapp

ನವದೆಹಲಿ :  ನಿರಂತರವಾಗಿ ಗಗನಮುಖಿಯಾಗಿ ಜನರಿಗೆ ತಲೆ ನೋವು ತಂದಿಟ್ಟಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಇದೀಗ ಸತತವಾಗಿ ಇಳಿಕೆಯಾಗುತ್ತಿದೆ. 

ಐದನೇ ದಿನ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಸೋಮವಾರ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತೀ ಲೀಟರ್ ಗೆ 30 ಪೈಸೆ , ಡೀಸೆಲ್  ಬೆಲೆ ಪ್ರತೀ ಲೀಟರ್ ಗೆ 27 ಪೈಸೆ ಇಳಿಕೆಯಾಗಿದೆ. 

ಇದರಿಂದ ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 86.34ರು.ಗಳಾಗಿದ್ದು, ಡೀಸೆಲ್ ಬೆಲೆ 74.92 ರು.ಗಳಾಗಿದೆ. 

ಇನ್ನು ಇದೆ ವೇಳೆ ದಿಲ್ಲಿಯಲ್ಲಿ ಇಲ್ಲಿನ ಸರ್ಕಾರ ತೈಲದ ಮೇಲಿನ ವ್ಯಾಟ್ ಕಡಿಮೆ ಮಾಡಲು ನಿರಾಕರಿಸಿರುವುದನ್ನು ವಿರೋಧಿಸಿ 400 ಪೆಟ್ರೋಲ್ ಬಂಕ್ ಬಂದ್ ಮಾಡಲಾಗಿದೆ. 

Follow Us:
Download App:
  • android
  • ios