ಹಬ್ಬದ ಈ ಸಂದರ್ಭದಲ್ಲಿ ಮತ್ತೊಮ್ಮೆ ವಾಹನ ಸವಾರರಿಗೆ ಗುಡ್ ನ್ಯೂಸ್ ದೊರಕಿದೆ. 2ನೇ ದಿನವೂ ಕೂಡ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.
ನವದೆಹಲಿ : ನಿರಂತರವಾಗಿ ಏರಿಕೆಯಾಗಿ ಜನರ ತಲೆ ಬಿಸಿ ತಂದಿಟ್ಟಿದ್ದ ಪೆಟ್ರೋಲ್ ಡೀಸೆಲ್ ದರ ಇದೀಗ 2ನೇ ದಿನವೂ ಕೂಡ ಇಳಿಕೆಯಾಗಿದೆ.
ಹಬ್ಬದ ಈ ಸಂದರ್ಭದಲ್ಲಿ ಈ ಮೂಲಕ ಕೊಂಚ ರಿಲೀಫ್ ದೊರಕಿದಂತಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ 24 ಪೈಸೆ , ಡೀಸೆಲ್ ಬೆಲೆಯಲ್ಲಿ 10 ಪೈಸೆ ಇಳಿದಿದೆ.
ಇದರಿಂದ ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 82.38 ರು.ಗಳಷ್ಟಾಗಿದೆ. ಡೀಸೆಲ್ ದರ 75.48 ರು.ಗೆ ಇಳಿದಿದೆ. ಮುಂಬೈನಲ್ಲಿ ಪೆಟ್ರೋಲ್ ದರ 87.84, ಡೀಸೆಲ್ ದರ 79.13 ರು. ಇಳಿಕೆಯಾಗಿದೆ.
