Asianet Suvarna News Asianet Suvarna News

ಮತ್ತೆ ಇಳಿಯಿತು ಪೆಟ್ರೋಲ್ ಬೆಲೆ: ಮತ್ತಷ್ಟು ಕುಸಿತದ ನಿರೀಕ್ಷೆ..!

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾನುವಾರ (ನವೆಂಬರ್ 18)ದಂದು ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿದ್ದು, ನಿರಂತರವಾಗಿ ಏರಿಕೆ ಕಾಣುತ್ತಿದ್ದ ಇಂಧನ ದರ ಈಗ ಇಳಿಕೆಯಾಗುತ್ತಿದೆ. ಇದ್ರಿಂದ ವಾಹನ ಸವಾರರಿಗೆ ಸಂತಸ ತಂದಿದೆ. 

Fuel prices continue downward trend, petrol rates down 20 paise
Author
Bengaluru, First Published Nov 18, 2018, 6:23 PM IST

ನವದೆಹಲಿ, (ನ.18): ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸುಮಾರು ಸತತ  25ನೇ ದಿನವೂ ಇಳಿಕೆ ಕಂಡು ಬಂದಿದೆ. ಕಳೆದ ತಿಳಿಂಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಮದ ಕಂಗೆಟ್ಟಿದ್ದ ವಾಹನ ಸವಾರರು ಕೊಂಚ ಮಟ್ಟಿಗೆ ಖುಷಿ ಪಡುತ್ತಿದ್ದಾರೆ.

ಯಾಕಂದ್ರೆ ಕಳೆದ 25 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಅಲ್ಪ-ಸ್ವಲ್ಪ ಇಳಿಕೆಯಾಗುತ್ತಿದೆ.

ತೈಲ ಬೆಲೆ: ಒಳ್ಳೆ ಕಾಲ ಬಂದಿದೆ ಎಂದು ಬೀಗಬೇಡ: ಮುಂದೆ ಕಾದಿದೆ ಶಾಕ್

 ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ ಬೆಲೆ 67.10 ಡಾಲರ್ ನಷ್ಟಿದೆ. ಇತ್ತೀಚೆಗೆ 86 ಡಾಲರ್ ಪ್ರತಿ ಬ್ಯಾರೆಲ್ ನಂತೆ ಏರಿಕೆಯಾಗಿತ್ತು. 

ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ (ಪ್ರತಿ 1 ಡಾಲರ್ 71.79 ರುಪಾಯಿ) ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ.

ದೆಹಲಿಯಲ್ಲಿ ಇಂಧನ ಬೆಲೆ ಎಷ್ಟು?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಧನ ಬೆಲೆಯಲ್ಲಿ ಇಳಿಕೆಯಾಗಿದ್ದು, 1 ಲೀ. ಪೆಟ್ರೋಲ್‌ಗೆ 20 ಪೈಸೆ ಕಡಿಮೆಯಾಗುವ ಮೂಲಕ 76.71 ರೂ.ಗಳಷ್ಟಿದ್ದರೆ, ಡೀಸೆಲ್‌ ಲೀಟರ್‌ಗೆ 20 ಪೈಸೆ ಕಡಿಮೆಯಾಗಿ 71.56 ರೂ.ಗಳಿಗೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ ಎಷ್ಟು?

ಇನ್ನು ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ಭಾನುವಾರ(ನ.18)ದಂದು ಪೆಟ್ರೋಲ್ 77.38 ರು(17 ಪೈಸೆ ಇಳಿಕೆ) ಶನಿವಾರದಂದು ಪೆಟ್ರೋಲ್ 77.55 ರು(17ಪೈಸೆ ಇಳಿಕೆ) ಶುಕ್ರವಾರದಂದು ಪೆಟ್ರೋಲ್ 77.72ರು (18 ಪೈಸೆ ಕಡಿತ).
 

Follow Us:
Download App:
  • android
  • ios