ರಾಜ್ಯದ 13 ಆಕಾಶವಾಣಿ ಕೇಂದ್ರಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 2.35 ರಿಂದ 3.05 ನಿಮಿಷದ ಅವಧಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ವರ್ಷ ಬುಕ್‌ಲೆಟ್ ಬದಲಾಗಿ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳು ಬೇರೆ ಬೇರೆಯಾಗಿರುವ ಕುರಿತು ಸಹ ಮಾಹಿತಿ ಒದಗಿಸಲಿದ್ದಾರೆ.

ಬೆಂಗಳೂರು(ಫೆ.18): ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಕಾಶವಾಣಿಯು ಫೆ.20ರಿಂದ ಮಾ.14ರ ವರೆಗೆ ಪರೀಕ್ಷಾ ಸಿದ್ಧತಾ ಕ್ರಮಗಳ ಸರಣಿ ಕಾರ್ಯಕ್ರಮ ಪ್ರಸಾರ ಮಾಡಲಿದೆ. ಸರಣಿ ಕಾರ್ಯಕ್ರಮದಲ್ಲಿ ಪಠ್ಯಪುಸ್ತಕ ರಚನೆ ಸಮಿತಿ ಅಧ್ಯಕ್ಷರು, ಶಿಕ್ಷಣ ತಜ್ಞರು, ಈ ಹಿಂದೆ ಪ್ರಶ್ನೆಪತ್ರಿಕೆ ಆಯ್ಕೆ ಸಮಿತಿಯಲ್ಲಿದ್ದವರು ಮತ್ತು ಅಧಿಕಾರಿಗಳು ಪಾಲ್ಗೊಂಡು ಮಾಹಿತಿ ನೀಡಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದ 13 ಆಕಾಶವಾಣಿ ಕೇಂದ್ರಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 2.35 ರಿಂದ 3.05 ನಿಮಿಷದ ಅವಧಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ವರ್ಷ ಬುಕ್‌ಲೆಟ್ ಬದಲಾಗಿ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳು ಬೇರೆ ಬೇರೆಯಾಗಿರುವ ಕುರಿತು ಸಹ ಮಾಹಿತಿ ಒದಗಿಸಲಿದ್ದಾರೆ.

ವೇಳಾಪಟ್ಟಿ:

ಫೆ.20- ಕನ್ನಡ, ಫೆ.21- ಇಂಗ್ಲಿಷ್, ಫೆ.22- ಅಂಕಗಣಿತ ಮತ್ತು ಬೀಜಗಣಿತ, ಫೆ.23- ರೇಖಾಗಣಿತ, ಫೆ.27- ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ, ಫೆ.28- ಜೀವಶಾಸ್ತ್ರ, ಮಾ.1- ಇತಿಹಾಸ ಮತ್ತು ಪೌರನೀತಿ, ಮಾ.2- ಅರ್ಥಶಾಸ್ತ್ರ ಮತ್ತು ಭೂಗೋಳ, ಮಾ.3- ತೃತೀಯ ಭಾಷೆ ಹಿಂದಿ, ಮಾ.6- ಇಂಗ್ಲಿಷ್ (ಪ್ರಥಮ ಭಾಷೆ), ಮಾ.7- ಸಂಸ್ಕೃತ (ಪ್ರಥಮ ಭಾಷೆ), ಮಾ.8- ಪರೀಕ್ಷಾ ಸಮಯ ನಿರ್ವಹಣೆ, ಮಾ.9- ಪರೀಕ್ಷಾ ಪದ್ಧತಿ ನಿರ್ಹವಣೆ ಮತ್ತು ನಿದ್ದೆ, ಮಾ.10- ಪರೀಕ್ಷಾ ಸಮಯದಲ್ಲಿ ಮಾನಸಿಕ ಸ್ಥಿತಿ, ಮಾ.13 ಮತ್ತು ಮಾ.14 ಶಿಕ್ಷಣ ತಜ್ಞರಿಂದ ಮಾಹಿತಿ ಒದಗಿಸಲಾಗುವುದು ಎಂದು ಆಕಾಶವಾಣಿ ಪ್ರಕಟಣೆ ತಿಳಿಸಿದೆ.