ತೆಲಂಗಾಣದಲ್ಲಿ ಟಿಡಿಪಿ, ಕಾಂಗ್ರೆಸ್, ಸಿಪಿಐ ಮೈತ್ರಿಯಿಂದ ವಿಚಲಿತವಾಗಿರುವ ಟಿಆರ್‌ಎಸ್ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಶ್ರಮಜೀವಿಗಳಿಗೆ ನೆರವಾಗಿ ಎಂಬ ಅಭಿಯಾನ ಆರಂಭಿಸಿದ್ದಾರೆ. 

ಹೈದ್ರಾಬಾದ್: ಚುನಾವಣೆ ವೇಳೆ ಅಭ್ಯರ್ಥಿಗಳು ಮತ ದಾರರ ಸೆಳೆಯಲು ಏನೆಲ್ಲಾ ಹೊಸ ತಂತ್ರಕ್ಕೆ ಕಾಯುತ್ತಾರೆ ಎಂಬುದಕ್ಕೆ ತೆಲಂಗಾಣದಲ್ಲಿ ಉದಾಹರಣೆ ಸಿಕ್ಕಿದೆ. 

ರಾಜ್ಯದಲ್ಲಿ ಟಿಡಿಪಿ, ಕಾಂಗ್ರೆಸ್, ಸಿಪಿಐ ಮೈತ್ರಿಯಿಂದ ವಿಚಲಿತವಾಗಿರುವ ಟಿಆರ್‌ಎಸ್ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಶ್ರಮಜೀವಿಗಳಿಗೆ ನೆರವಾಗಿ ಎಂಬ ಅಭಿಯಾನ ಆರಂಭಿಸಿದ್ದಾರೆ.

ಈ ನಿಟ್ಟಿನಲ್ಲಿ ಟಿಆರ್‌ಎಸ್ ಅಭ್ಯರ್ಥಿಗಳು ಕ್ಷೌರದ ಅಂಗಡಿಗೆ ತಾವೇ ಜನರಿಗೆ ಕ್ಷೌರ ಮಾಡುವ, ಐರನ್ ಶಾಪ್‌ಗೆ ಹೋಗಿ ತಾವೇ ಐರನ್, ಕಟ್ಟಡ ನಿರ್ಮಾಣ ಸ್ಥಳಕ್ಕೆ ಮರಳು ಸೋಸುವ, ರಸ್ತೆ ಬದಿಯಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯ ಮೈಗೆ ನೀರು ಹೊಯ್ದು ತಾವೇ ಸ್ನಾನ ಮಾಡಿಸಿ ಗಮನ ಸೆಳೆದಿದ್ದಾರೆ.