ಮೈಸೂರು ಅಂದರೆ ಇಡೀ ರಾಜ್ಯದಲ್ಲೇ ಬ್ರಾಂಡ್ ಆಗಿತ್ತು. ಮೈಸೂರು ಪಾಕ್, ಮೈಸೂರು ಸಿಲ್ಕ್, ಮೈಸೂರು ಸ್ಯಾಂಡಲ್, ಮೈಸೂರು ಮಲ್ಲಿಗೆ ,ಮೈಸೂರು ಬ್ಯಾಂಕ್ ಹೀಗೆ ಹಲವು ವಿಶೇಷತೆಗಳನ್ನು ಪಡೆದಿತ್ತು. ಆದರೆ ಈ ಪೈಕಿ ಈಗ ಮೈಸೂರು ಬ್ಯಾಂಕ್ ಮರೆಯಾಗಲಿದ್ದು, ಐತಿಹಾಸಿಕ ಪುಟಗಳಲ್ಲಿ ಸೇರಲಿದೆ. ಈ ಕುರಿತಾದ ಒಂದು ವಿಶೇಷ ವರದಿ

ಚಿಕ್ಕಬಳ್ಳಾಪುರ(ಮಾ.29): ಮೈಸೂರು ಅಂದರೆ ಇಡೀ ರಾಜ್ಯದಲ್ಲೇ ಬ್ರಾಂಡ್ ಆಗಿತ್ತು. ಮೈಸೂರು ಪಾಕ್, ಮೈಸೂರು ಸಿಲ್ಕ್, ಮೈಸೂರು ಸ್ಯಾಂಡಲ್, ಮೈಸೂರು ಮಲ್ಲಿಗೆ ,ಮೈಸೂರು ಬ್ಯಾಂಕ್ ಹೀಗೆ ಹಲವು ವಿಶೇಷತೆಗಳನ್ನು ಪಡೆದಿತ್ತು. ಆದರೆ ಈ ಪೈಕಿ ಈಗ ಮೈಸೂರು ಬ್ಯಾಂಕ್ ಮರೆಯಾಗಲಿದ್ದು, ಐತಿಹಾಸಿಕ ಪುಟಗಳಲ್ಲಿ ಸೇರಲಿದೆ. ಈ ಕುರಿತಾದ ಒಂದು ವಿಶೇಷ ವರದಿ

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಂದಿಗೂ ಕೂಡ ಇಡೀ ಕರ್ನಾಟಕದಲ್ಲೆ ಎಲ್ಲರ ಮನಸ್ಸಿನಲ್ಲಿ ಇರುವ ಜನಸ್ನೇಹಿ ಬ್ಯಾಂಕ್. ಮೈಸೂರು ರಾಜರ ಆಳ್ವಿಕೆಯಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ 1913ರಲ್ಲಿ ಸ್ಥಾಪಿಸಿದ ಬ್ಯಾಂಕ್ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸಿ ಜನಮನ್ನಣೆ ಗಳಿಸಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕನ್ನು ಜನ ಕರೆಯುವುದು ಮೈಸೂರು ಬ್ಯಾಂಕ್ ಎಂದು. ಅಷ್ಟರ ಮಟ್ಟಿಗೆ ಜನರ ಮೇಲೆ ಪ್ರಭಾವ ಬೀರಿದ ಎಸ್ ಬಿಎಂ ಇನ್ನೂ ಇತಿಹಾಸ ಪುಟ ಸೇರಲಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾಗುತ್ತಿದೆ. 

ರಾಜ್ಯದಲ್ಲಿ ಸುಮಾರು 1 ಸಾವಿರ ಶಾಖೆಗಳನ್ನು ಮೈಸೂರು ಬ್ಯಾಂಕ್ ಹೊಂದಿದೆ. 10 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯುನಿರ್ವಹಿಸುತ್ತಿದ್ದಾರೆ. ಇವರೆಲ್ಲರು ಕೂಡ ಏಪ್ರಿಲ್ 1 ರಿಂದ ಎಸ್ ಬಿಐ ಉದ್ಯೋಗಿಗಳಾಗಲಿದ್ದಾರೆ. ಎಸ್​ಬಿಎಂ ಗ್ರಾಹಕರು ಎಸ್​ಬಿಐ ಗ್ರಾಹಕರಾಗಲಿದ್ದಾರೆ.

ಜಾಗತಿಕ ಮಟ್ಟದಲ್ಲಿ ಪೈಪೋಟಿ ದೃಷ್ಟಿಯಿಂದ ಸರ್ಕಾರ ಈ ವಿಲೀನ ನಿರ್ಧಾರಕ್ಕೆ ಬಂದಿದೆ. ಮೈಸೂರು ಬ್ಯಾಂಕ್ ಮಾತ್ರವಲ್ಲ. ಸ್ಟೇಟ್ ಬ್ಯಾಂಕ್ ಟ್ರಾವಂಕೂರ್, ಪಟಿಯಾಲ. ಹೈದರಾಬಾದ್, ಜೈಪುರ್ ಅಂಡ್ ಬಿಕೆನಾರ್ ಕೂಡ ವೀಲಿನವಾಗುತ್ತಿವೆ. ಏನೇ ಆದರೂ ಇಡೀ ವಿಶ್ವದಲ್ಲಿ ಮೈಸೂರು ಅಂದ್ರೆ ಕರ್ನಾಟಕವನ್ನು ನೆನಪಿಸುತ್ತಿದ್ದ ಮೈಸೂರು ಬ್ಯಾಂಕ್ ವಿಲೀನ ಕನ್ನಡಿಗರಿಗೆ ಬೇಸರ ತರಿಸುತ್ತಿರುವುದಂತೂ ಸತ್ಯ.