ತಮಿಳಿನಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಿರುವ ಕಮಲ್ ಹಾಸನ್ ಹಾಗೂ ಬಿಗ್’ಬಾಸ್ ಸ್ಪರ್ಧಿಗಳನ್ನು ಬಂಧಿಸಬೇಕೆಂದು ಹಿಂದೂ ಮಕ್ಕಲ್ ಕಾಟ್ಚಿ ಎನ್ನುವ ಹಿಂದೂ ಸಂಘಟನೆಯೊಂದು ಒತ್ತಾಯಿಸಿದೆ. 7 ಕೋಟಿ ತಮಿಳರ ಭಾವನೆಗಳಿಗೆ ರಿಯಾಲಿಟಿ ಶೋ ನೋವುಂಟು ಮಾಡಿದೆ. ಕಳೆದ ಪಿಸೋಡ್’ನಲ್ಲಿ ಸ್ಪರ್ಧಿಗಳು ಪರಸ್ಪರ ಮೂತ್ರವನ್ನು ಎರಚಿಕೊಂಡು ಅಸಭ್ಯವಾಗಿ ವರ್ತಿಸಿದ್ದರು ಎಂದು ಸಂಘಟನೆ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ಕಮಲ್ ಹಾಸನ್’ರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಚೆನ್ನೈ (ಜು.12): ತಮಿಳಿನಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಿರುವ ಕಮಲ್ ಹಾಸನ್ ಹಾಗೂ ಬಿಗ್’ಬಾಸ್ ಸ್ಪರ್ಧಿಗಳನ್ನು ಬಂಧಿಸಬೇಕೆಂದು ಹಿಂದೂ ಮಕ್ಕಲ್ ಕಾಟ್ಚಿ ಎನ್ನುವ ಹಿಂದೂ ಸಂಘಟನೆಯೊಂದು ಒತ್ತಾಯಿಸಿದೆ. 7 ಕೋಟಿ ತಮಿಳರ ಭಾವನೆಗಳಿಗೆ ರಿಯಾಲಿಟಿ ಶೋ ನೋವುಂಟು ಮಾಡಿದೆ. ಕಳೆದ ಪಿಸೋಡ್’ನಲ್ಲಿ ಸ್ಪರ್ಧಿಗಳು ಪರಸ್ಪರ ಮೂತ್ರವನ್ನು ಎರಚಿಕೊಂಡು ಅಸಭ್ಯವಾಗಿ ವರ್ತಿಸಿದ್ದರು ಎಂದು ಸಂಘಟನೆ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ಕಮಲ್ ಹಾಸನ್’ರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಬಿಗ್’ಬಾಸ್’ನಲ್ಲಿ ತೋರಿಸುವ ಅಂಶಗಳು ಭಾರತೀಯ ಸಂಸ್ಕೃತಿಗೆ ವಿರುದ್ಧವಾದುದು. ಇದಕ್ಕೆ ಯಾರೂ ಬೆಂಬಲಿಸುವುದಿಲ್ಲ. ಹಿಂದೊಮ್ಮೆ ಕಮಲ್ ಹಾಸನ್ ಮಹಾಭಾರತ ಮತ್ತು ಹಿಂದೂ ಸಂಸ್ಕೃತಿಯ ವಿರುದ್ಧ ಮಾತನಾಡಿದ್ದರು. ಈ ಶೋನಲ್ಲಿ ಮುಂದೆಯೂ ಕೂಡಾ ಮಾತನಾಡಲಿದ್ದಾರೆ. ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಲಿದ್ದಾರೆ ಎಂದು ಸಂಘಟನೆ ಹೇಳಿದೆ.

ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋ ಸಾಮಾಜಿಕ ಮೌಲ್ಯಗಳನ್ನು ಹಾಳು ಮಾಡುತ್ತಿದೆ. ಎಲ್ಲಾ ಶಾಲೆಗಳನ್ನು ಹಾಡುವ ಹಾಡೊಂದನ್ನು ಅಣಕು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.