ಬೆಂಗಳೂರು, (ಸೆ.12): ನಾಳೆ ಅಂದ್ರೆ ಶುಕ್ರವಾರ ಸೆಪ್ಟೆಂಬರ್ 13ಕ್ಕೆ ಡಿಕೆ ಶಿವಕುಮಾರ್ ಅವರ ಇಡಿ ಕಸ್ಟಡಿ ಅಂತ್ಯವಾಗಲಿದೆ. ಮತ್ತೊಂದೆಡೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಇಡಿ ವಶದಲ್ಲಿರುವ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಸಹ ಇದೆ. ಈ ಹಿನ್ನೆಲೆಯಲ್ಲಿ  ಡಿಕೆ ಶಿವಕುಮಾರ್‌ಗೆ ಶುಕ್ರವಾರ ನಿರ್ಣಾಯಕ ದಿನವಾಗಿದೆ.

ಡಿಕೆ ಶಿವಕುಮಾರ್  ವಿಚಾರಣೆ ಶುಕ್ರವಾರಕ್ಕೆ ಅಂತ್ಯವಾವಾಗಲಿದೆ. ಈ ಹಿನ್ನೆಲೆಯಲ್ಲಿ ಅಂದೇ ಇಡಿ ಅಧಿಕಾರಿಗಳು ಡಿಕೆಶಿಯನ್ನು  ರೋಸ್ ಅವೆನ್ಯೂ ಕೋರ್ಟ್  ಮುಂದೆ ಹಾಜರುಪಡಿಸಲಿದ್ದು, ಕಸ್ಟಡಿ ಅವಧಿ ವಿಸ್ತರಣೆಗಾಗಿ ಇಡಿ ಅಧಿಕಾರಿಗಳ ಪರ ವಕೀಲ ಜಡ್ಜ್ ಮುಂದೆ ಮನವಿ ಮಾಡುವ ಸಾಧ್ಯತೆಗಳಿವೆ.

ಡಿಕೆಶಿ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನು ಡಿಕೆಶಿ ಪರ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯೂ ಸಹ ನಾಳೆ [ಶುಕ್ರವಾರ] ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ನಡೆಯಲಿದೆ.  ಈ ಹಿನ್ನೆಲೆಯಲ್ಲಿ ಶುಕ್ರವಾರ ಡಿಕೆಶಿ ಪಾಲಿಗೆ ಮಹತ್ವದ ದಿನವಾಗಿದ್ದು, ಡಿಕೆಶಿಗೆ ಬೇಲೋ? ಜೈಲೋ? ಎನ್ನುವುದನ್ನು ಕಾದುನೋಡಬೇಕಿದೆ. 

ದೆಹಲಿಯ ಪ್ಲಾಟ್ ನಲ್ಲಿ ಸಿಕ್ಕ 8.6 ಕೋಟಿ ರು. ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಶಿಕಮಾರ್ ಅವರಿಗೆ ಸಮನ್ಸ್ ನೀಡಿ ನವದೆಹಲಿಯಲ್ಲಿಯ ಕಚೇರಿಯಲ್ಲಿ ನಾಲ್ಕು ದಿನಗಳ ವರೆಗೆ ಸುದೀರ್ಘ ವಿಚಾರಣೆ ನಡೆಸಿತ್ತು. ಬಳಿಕ 5ನೇ ದಿನಕ್ಕೆ [ಸೆ.03] ವಿಚಾರಣೆಗೆ ಬಂದ ವೇಳೆ  ಡಿಕೆಶಿಯನ್ನು ವಶಕ್ಕೆ ಪಡೆದಿದ್ದ ಇಡಿ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. 

ವಿಚಾರಣೆ ಮಾಡುವ ಅವಶ್ಯಕತೆ ಇರುವುದರಿಂದ ಡಿಕೆಶಿ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಇಡಿ ಅಧಿಕಾರಿಗಳು ತಮ್ಮ ವಕೀಲರ ಮೂಲಕ ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ್ದ ವಿಶೇಷ ಕೋರ್ಟ್ ಡಿಕೆಶಿಯನ್ನು ಸೆ.13 ವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು.