ಹಣ ಬದಲಾವಣೆಗೆ ಯಾವ ದಾಖಲೆ ಸಲ್ಲಿಸಬೇಕು; ಎಷ್ಟು ಹಣ ಡ್ರಾ ಮಾಡಬಹುದು ಇತ್ಯಾದಿ ನೂರಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತಿರುತ್ತವೆ. ಇಂಥ ಕೆಲ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ.
ಬೆಂಗಳೂರು(ನ. 15): ಜನಸಾಮಾನ್ಯರು ಈಗ ಕಪ್ಪುಹಣದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ತಮ್ಮ ಹಳೆಯ ನೋಟು ವಿನಿಮಯ ಮಾಡಿಕೊಳ್ಳುವುದು; ಕ್ಯಾಷ್ ಡ್ರಾ ಮಾಡಿಕೊಳ್ಳುವುದರ ಬಗ್ಗೆಯೇ ಯೋಚಿಸುತ್ತಿದ್ದಾರೆ. ದಿನದಲ್ಲಿ ಯಾವ ಟೈಮಲ್ಲಿ ಹೋದರೂ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಕ್ಯೂ ಉದ್ದುದ್ದ ಬೆಳೆಯತ್ತಲೇ ಇದೆ. ಹಣ ಬದಲಾವಣೆಗೆ ಯಾವ ದಾಖಲೆ ಸಲ್ಲಿಸಬೇಕು; ಎಷ್ಟು ಹಣ ಡ್ರಾ ಮಾಡಬಹುದು ಇತ್ಯಾದಿ ನೂರಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತಿರುತ್ತವೆ. ಇಂಥ ಕೆಲ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ.
1) ಒಮ್ಮೆಗೆ ಎಷ್ಟು ಹಣ ಡೆಪಾಸಿಟ್ ಮಾಡಬಹುದು?
ಉತ್ತರ : ಎಷ್ಟು ಬೇಕಾದರೂ ಹಾಕಬಹುದು. ಲಿಮಿಟ್ ಇಲ್ಲ
2) ಡೆಪಾಸಿಟ್ ಮಾಡಿದ ಹಣವನ್ನೆಲ್ಲ ಕ್ಯಾಷ್'ನಲ್ಲೇ ಕೊಡುತ್ತಾರಾ?
ಉತ್ತರ : 4500 ರೂ. ಕ್ಯಾಷ್, ಉಳಿದದ್ದು ಖಾತೆಗೆ ಬರುತ್ತೆ
3) 4 ಸಾವಿರಕ್ಕಿಂತ ಹೆಚ್ಚು ಕ್ಯಾಷ್ ಬೇಕೇ ಬೇಕು. ಏನು ಮಾಡೋದು?
ಉತ್ತರ: ಚೆಕ್ ಅಥವಾ ಡಿಡಿ ಅಥವಾ ಆನ್'ಲೈನ್'ನಲ್ಲಿ ವ್ಯವಹಾರ ಮಾಡಬಹುದು
4) ಬ್ಯಾಂಕ್ ಅಕೌಂಟ್ ಇಲ್ಲದಿದ್ದರೆ ಏನು ಮಾಡಬೇಕು?
ಉತ್ತರ: ಗುರುತಿನ ಪತ್ರಗಳನ್ನು ತೋರಿಸಿ, ಹಣ ಬದಲಾವಣೆ ಮಾಡಿಕೊಳ್ಳಿ
5) ಅಕೌಂಟ್ ಇಲ್ಲದ ಬ್ಯಾಂಕ್'ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದಾ?
ಉತ್ತರ: ಮಾಡಿಕೊಳ್ಳಬಹುದು. ಗುರುತಿನ ಪತ್ರ ಇಟ್ಟುಕೊಂಡಿರಬೇಕು
6) ಯಾವುದೇ ಬ್ಯಾಂಕ್'ನಲ್ಲಾದರೂ ವಿನಿಮಯ ಮಾಡಿಕೊಳ್ಳಬಹುದಾ?
ಉತ್ತರ: ಹೌದು. ಯಾವ ಬ್ಯಾಂಕ್ನಲ್ಲಾದರೂ ವಿನಿಮಯ ಮಾಡಿಕೊಳ್ಳಬಹುದು
7) ಗೆಳೆಯರು, ಬಂಧುಗಳ ಮೂಲಕ ವಿನಿಮಯ ಮಾಡಿಸಿಕೊಳ್ಳಬಹುದಾ?
ಉತ್ತರ: ಮಾಡಿಸಿಕೊಳ್ಳಬಹುದು. ಆದರೆ, ನೀವೇ ಹೋದರೆ ಒಳ್ಳೆಯದು
8) ವೈಯಕ್ತಿಕವಾಗಿ ನಾವೇ ಬ್ಯಾಂಕ್ಗೆ ಹೋಗಬೇಕಾ?
ಉತ್ತರ: ಹೌದು. ನೀವೇ ಹೋಗಬೇಕು.
9) ಎಟಿಎಂಗಳಲ್ಲಿ ಎಷ್ಟು ಹಣ ಡ್ರಾ ಮಾಡಿಕೊಳ್ಳಬಹುದು?
ಉತ್ತರ: ಈಗ ದಿನಕ್ಕೆ 2500 ರೂ. ಡ್ರಾ ಮಾಡಿಕೊಳ್ಳಬಹುದು.
10) ಎಟಿಎಂ ಯಂತ್ರಗಳಲ್ಲಿ ಹಳೆಯ ನೋಟುಗಳನ್ನು ಡೆಪಾಸಿಟ್ ಮಾಡಬಹುದಾ?
ಉತ್ತರ: ಮಾಡಬಹದು.
11) ಚೆಕ್'ನಲ್ಲಿ ಎಷ್ಟು ಕ್ಯಾಷ್ ಪಡೆಯಬಹುದು ?
ಉತ್ತರ: ದಿನಕ್ಕೆ ಗರಿಷ್ಠ 10 ಸಾವಿರ ಮತ್ತು ವಾರಕ್ಕೆ ಗರಿಷ್ಠ 24 ಸಾವಿರ ರೂ. ಕ್ಯಾಷ್ ಪಡೆದುಕೊಳ್ಳಬಹುದು
12) ಬ್ಯಾಂಕ್'ಗಳಲ್ಲಿ ಬೇರೆ ವ್ಯವಹಾರ ಹೇಗೆ ಮಾಡುವುದು?
ಉತ್ತರ : NEFT/RTGS/IMPS/ಇಂಟರ್ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್'ಗೆ ಯಾವುದೇ ಸಮಸ್ಯೆ ಇಲ್ಲ
13) ಬೇರೆ ಎಟಿಎಂಗಳಲ್ಲಿ ಡ್ರಾ ಮಾಡಿದರೆ, ಸೇವಾ ತೆರಿಗೆ ಬೀಳುತ್ತಾ?
ಉತ್ತರ: ಡಿ.30ರವರೆಗೆ ಯಾವ ಎಟಿಎಂನಲ್ಲಿ ಡ್ರಾ ಮಾಡಿದರೂ ಸರ್ವಿಸ್ ಟ್ಯಾಕ್ಸ್ ಇಲ್ಲ
14) ಹಣ ಪಡೆದವರ ಬೆರಳಿಗೆ ಶಾಯಿ ಹಾಕುತ್ತಿರುವುದು ಏಕೆ?
ಉತ್ತರ: ಕಾಳಧನಿಕರು ಅಮಾಯಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಶಾಯಿ ಹಾಕಲಾಗುತ್ತಿದೆ
15) ಜನ್'ಧನ್ ಖಾತೆಯಲ್ಲಿ ಎಷ್ಟು ಹಣ ಡೆಪಾಸಿಟ್ ಮಾಡಬಹುದು?
ಉತ್ತರ: ಎಷ್ಟು ಬೇಕಾದರೂ ಮಾಡಬಹುದು. ಆದರೆ, ಲೆಕ್ಕ ತೋರಿಸಲೇಬೇಕು
16) ಎಟಿಎಂಗಳಲ್ಲಿ ಕ್ಯೂ ಹೆಚ್ಚುತ್ತಲೇ ಇರುವುದು ಏಕೆ?
ಉತ್ತರ: ಒಬ್ಬರೇ ವ್ಯಕ್ತಿಗಳು ಹಲವು ಬ್ಯಾಂಕ್'ಗಳಿಗೆ ಕ್ಯಾಷ್ ಪಡೆಯಲು ಹೋಗುತ್ತಿರುವುದೇ ಕಾರಣ
17) ಹಳೆಯ 500, 1000 ರೂ. ನೋಟುಗಳನ್ನು ಏನು ಮಾಡುವುದು?
ಉತ್ತರ: ಸರ್ಕಾರಿ ಕಚೇರಿಗಳಲ್ಲಿ ಬಿಲ್, ತೆರಿಗೆ ಕಟ್ಟಲು ಬಳಸಬಹುದು
18) ಪೆಟ್ರೋಲ್ ಬಂಕ್, ಆಸ್ಪತ್ರೆ, ಮೆಡಿಕಲ್ ಸ್ಟೋರ್'ಗಳಲ್ಲಿ ಹೇಗೆ?
ಉತ್ತರ: ಹಳೆಯ ನೋಟುಗಳನ್ನು ಸ್ವೀಕರಿಸಲೇಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕ್ರಮ
19) ಬ್ಯಾಂಕುಗಳಲ್ಲಿ ಕ್ಯಾಷ್ ಕಡಿಮೆ ಇದೆಯಾ? ಹಣ ಸಿಗೋದಿಲ್ಲವಾ?
ಉತ್ತರ: ಅನುಮಾನ, ಆತಂಕ ಬೇಡವೇ ಬೇಡ. ಬ್ಯಾಂಕ್'ಗಳಲ್ಲಿ ಸಾಕಷ್ಟು ಕ್ಯಾಷ್ ಇದೆ
20) ಮನೆಯಲ್ಲಿ ಮದುವೆ ಮತ್ತಿತರ ಕಾರ್ಯಕ್ರಮಗಳಿದ್ದರೆ ಏನು ಮಾಡಬೇಕು?
ಉತ್ತರ: ಬೇರೆ ದಾರಿ ಇಲ್ಲ. ಚೆಕ್ ಅಥವಾ ಆನ್ಲೈನ್ ಮೂಲಕ ಪಾವತಿಸಬೇಕು
21) PAN ಕಾರ್ಡ್ ಇಲ್ಲದಿದ್ದರೆ ಏನು ಮಾಡುವುದು?
ಉತ್ತರ: 50 ಸಾವಿರಕ್ಕಿಂತ ಕಡಿಮೆ ಡೆಪಾಸಿಟ್'ಗೆ PAN ಕಾರ್ಡ್ ಅಗತ್ಯವಿಲ್ಲ
22) ಸಾಲಗಾರರು ದಿಢೀರ್ ಹಣ ಮರುಪಾವತಿ ಮಾಡಿದರೆ ಏನು ಮಾಡುವುದು?
ಉತ್ತರ: ಹಣ ತೆಗೆದುಕೊಳ್ಳಿ, ವಿನಿಮಯ ಮಾಡಿಕೊಳ್ಳಿ. ಆದರೆ, ಸರಿಯಾದ ಲೆಕ್ಕಪತ್ರ ಇಟ್ಟುಕೊಳ್ಳಿ.
23) ಗೃಹಿಣಿಯರು ಏನು ಮಾಡುವುದು?
ಉತ್ತರ: ಎರಡೂವರೆ ಲಕ್ಷದವರೆಗೆ ಡೆಪಾಸಿಟ್ ಮಾಡಲು ತೊಂದರೆ ಇಲ್ಲ
24) ಎರಡೂವರೆ ಲಕ್ಷಕ್ಕಿಂತ ಹೆಚ್ಚು ಡೆಪಾಸಿಟ್ ಮಾಡಲು ಏನು ಮಾಡಬೇಕು?
ಉತ್ತರ: ಡೆಪಾಸಿಟ್ ಮಾಡಲು ಯಾವ ಅಡ್ಡಿಯೂ ಇಲ್ಲ. ಆದರೆ, ಆದಾಯದ ಮೂಲ ತೋರಿಸಲೇಬೇಕು
25) ರೈತರು ಏನು ಮಾಡಬೇಕು? ಎಷ್ಟು ಡೆಪಾಸಿಟ್ ಮಾಡಬಹುದು?
ಉತ್ತರ: ವಾಣಿಜ್ಯ ಬೆಳೆಗಾರರು ಹೆಕ್ಟೇರ್'ಗೆ 1 ಲಕ್ಷದವರೆಗೆ ಆದಾಯ ತೋರಿಸಬಹುದು.
26) ಸಾಮಾನ್ಯ ರೈತರು ಎಷ್ಟು ಹಣವನ್ನು ಡೆಪಾಸಿಟ್ ಮಾಡಬಹುದು?
ಉತ್ತರ: ಹೆಕ್ಟೇರ್ಗೆ 25 ಸಾವಿರ ಆದಾಯ ತೋರಿಸಬಹುದು. ಎರಡೂವರೆ ಲಕ್ಷದವರೆಗೆ ಡೆಪಾಸಿಟ್ ಮಾಡಬಹುದು.
27) ಭೂಮಿ ಮಾರಿದ ಹಣ ಕ್ಯಾಷ್ ಇದ್ದರೆ ಏನು ಮಾಡಬೇಕು?
ಉತ್ತರ: ರಿಜಿಸ್ಟರ್ ಮಾಡಿಸಿರುವ ಮೊತ್ತವನ್ನು ಬ್ಯಾಂಕ್'ನಲ್ಲಿ ಹಾಕಬಹುದು. ಯಾವ ತೊಂದರೆಯೂ ಇಲ್ಲ
28) ಹಳೆಯ ಎಲ್ಲ 500, 1000 ರೂ. ನೋಟುಗಳೆಲ್ಲ ಕಪ್ಪುಹಣಾನಾ?
ಉತ್ತರ : ಪ್ರಾಮಾಣಿಕರಿಗೆ ಆತಂಕ ಬೇಡ. ಕೋಟಿ ಕೋಟಿ ಕ್ಯಾಷ್ ಇಟ್ಟುಕೊಂಡವರಿಗಷ್ಟೇ ಟೆನ್ಷನ್.
29) ಅಂಗಡಿಗಳಲ್ಲಿ ಗ್ರಾಹಕರು, ಕ್ಯಾಷ್'ನಲ್ಲೇ ವಸ್ತುಗಳನ್ನು ಖರೀದಿಸಿದರೆ ಏನು ಮಾಡಬೇಕು?
ಉತ್ತರ: ಹಣ ತೆಗೆದುಕೊಳ್ಳಿ. ಬಿಲ್ ಇಟ್ಟುಕೊಳ್ಳಿ. ನಗದನ್ನು ಬ್ಯಾಂಕ್ಗೆ ಪಾವತಿಸಿ. ಗ್ರಾಹಕರ ವಿವರ ಇರಲಿ
30) ಹಲವು ವರ್ಷಗಳಿಂದ ವ್ಯಾಪಾರ ಮಾಡಿ, ಟ್ಯಾಕ್ಸ್ ಕಟ್ಟದೆ, ಕ್ಯಾಷ್ ಇಟ್ಟುಕೊಂಡವರು ಏನು ಮಾಡಬೇಕು?
ಉತ್ತರ : ಚಾರ್ಟೆಡ್ ಅಕೌಂಟೆಂಟ್ ಸಂಪರ್ಕಿಸಿ. ಸೂಕ್ತ ದಾಖಲೆ ಸಲ್ಲಿಸಿ ತೆರಿಗೆ ಕಟ್ಟಿ
