ಫ್ರೆಂಚ್ ಅಧ್ಯಕ್ಷರ ಶ್ವಾನದ ವಿಡಿಯೋ ಒಂದು ಇದೀಗ ವೈರಲ್ ಆಗಿದ್ದು, ಜಗತ್ತಿನಾದ್ಯಂತ ಭಾರಿ ಸದ್ದು ಮಾಡ್ತಿದೆ. ಎಲ್ಲೇ ಹೋದ್ರೂ ತಮ್ಮ ನೆಚ್ಚಿನ ಶ್ವಾನದ ಜೊತೆಗೆ ಹೋಗೋ ಫ್ರೆಂಚ್ ಅಧ್ಯಕ್ಷ ಮಾಕ್ರೋನ್, ತಮ್ಮ ಅಧಿಕೃತ ನಿವಾಸದಲ್ಲಿ ಮಂತ್ರಿಗಳ ಜೊತೆ ಮೀಟಿಂಗ್ ಮಾಡುತ್ತಿದ್ದರು ಮಾಧ್ಯಮಗಳೂ ಅದನ್ನ ನೇರಪ್ರಸಾರ ಮಾಡ್ತಿದ್ವು. ಅದೇ ಸಮಯಕ್ಕೆ ಸರಿಯಾಗಿ ಅಧ್ಯಕ್ಷರ ಶ್ವಾನ ಹಿಂದೆ ಬಂದು ಮೂತ್ರ ವಿಸರ್ಜನೆ ಮಾಡಿದೆ.
ಪ್ಯಾರಿಸ್(ಅ.24): ಫ್ರೆಂಚ್ ಅಧ್ಯಕ್ಷರ ಶ್ವಾನದ ವಿಡಿಯೋ ಒಂದು ಇದೀಗ ವೈರಲ್ ಆಗಿದ್ದು, ಜಗತ್ತಿನಾದ್ಯಂತ ಭಾರಿ ಸದ್ದು ಮಾಡ್ತಿದೆ. ಎಲ್ಲೇ ಹೋದ್ರೂ ತಮ್ಮ ನೆಚ್ಚಿನ ಶ್ವಾನದ ಜೊತೆಗೆ ಹೋಗೋ ಫ್ರೆಂಚ್ ಅಧ್ಯಕ್ಷ ಮಾಕ್ರೋನ್, ತಮ್ಮ ಅಧಿಕೃತ ನಿವಾಸದಲ್ಲಿ ಮಂತ್ರಿಗಳ ಜೊತೆ ಮೀಟಿಂಗ್ ಮಾಡುತ್ತಿದ್ದರು ಮಾಧ್ಯಮಗಳೂ ಅದನ್ನ ನೇರಪ್ರಸಾರ ಮಾಡ್ತಿದ್ವು. ಅದೇ ಸಮಯಕ್ಕೆ ಸರಿಯಾಗಿ ಅಧ್ಯಕ್ಷರ ಶ್ವಾನ ಹಿಂದೆ ಬಂದು ಮೂತ್ರ ವಿಸರ್ಜನೆ ಮಾಡಿದೆ.
ಈ ದೃಶ್ಯ ಕೂಡ ನೇರಪ್ರಸಾರವಾಗಿದೆ. ಇನ್ನೂ ತಮ್ಮ ಶ್ವಾನ ಮಾಡಿದ ಈ ಕೆಲಸದಿಂದ ಫ್ರೆಂಚ್ ಅಧ್ಯಕ್ಷರು ತೀವ್ರ ಮುಜುಗರಕ್ಕೀಡಾದ್ರು. ಆ ಬಳಿಕ ಮುಂದೆ ಎಲ್ಲೂ ತಮ್ಮ ಶ್ವಾನವನ್ನ ಕರೆದುಕೊಂಡು ಹೋಗಬಾರದು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ.
