ಪುರುಷ ಓದುಗರಿಗೆ ಪತ್ರಿಕೆಯ ಬೆಲೆಯನ್ನು ಶೇ.25ರಷ್ಟುಏರಿಕೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದೇ ಮಹಿಳೆಯರು ಮತ್ತು ಪುರುಷರ ನಡುವಿನ ವೇತನ ತಾರತಮ್ಯದ ಬಗ್ಗೆ ಧ್ವನಿಯೆತ್ತುವ ವಿನೂತನ ಯತ್ನವನ್ನು ಪ್ರೆಂಚ್‌ ಪತ್ರಿಕೆಯೊಂದು ಮಾಡಿದೆ.

ಪ್ಯಾರಿಸ್ : ಪುರುಷ ಓದುಗರಿಗೆ ಪತ್ರಿಕೆಯ ಬೆಲೆಯನ್ನು ಶೇ.25ರಷ್ಟುಏರಿಕೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದೇ ಮಹಿಳೆಯರು ಮತ್ತು ಪುರುಷರ ನಡುವಿನ ವೇತನ ತಾರತಮ್ಯದ ಬಗ್ಗೆ ಧ್ವನಿಯೆತ್ತುವ ವಿನೂತನ ಯತ್ನವನ್ನು ಪ್ರೆಂಚ್‌ ಪತ್ರಿಕೆಯೊಂದು ಮಾಡಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಎರಡು ರೀತಿಯಲ್ಲಿ ಪ್ರೆಂಚ್‌ನ ‘ಲಿಬರೇಷನ್‌’ ಪತ್ರಿಕೆಯನ್ನು ಸಿದ್ಧಪಡಿಸಲಾಗಿದ್ದು, ಮಹಿಳೆಯರಿಗಾಗಿನ ಪತ್ರಿಕೆ ಬೆಲೆ 2 ಯೂರೋ(161.40 ರು.)ಗಳು ಮತ್ತು ಪುರುಷರಿಗಾಗಿನ ಪತ್ರಿಕೆ ಬೆಲೆ 2.50 ಯೂರೋ(201.84)ಗಳು ಎಂದು ನಮೂದಿಸಲಾಗಿದೆ. ಅಲ್ಲದೆ, 1972ರಲ್ಲೇ ದೇಶದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮ ಜಾರಿಗೆ ಬಂದಿದೆ.

ಇದರ ಹೊರತಾಗಿಯೂ, ಪುರುಷರು ಗಳಿಸುವ ವೇತನಕ್ಕಿಂತ ಮಹಿಳೆಯರ ವೇತನ ಶೇ.25.7ರಷ್ಟುಕಡಿಮೆಯಿದೆ ಎಂದು ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಪುರುಷರು ಮತ್ತು ಮಹಿಳೆಯರ ವೇತನ ತಾರತಮ್ಯ ಎತ್ತಿ ತೋರುವ ನಿಟ್ಟಿನಲ್ಲಿ ಪುರುಷರಿಗೆ ಪತ್ರಿಕೆ ಬೆಲೆಯನ್ನು ಗುರುವಾರ ಏರಿಕೆ ಮಾಡಲಾಗಿತ್ತು. ಇದರಿಂದ ಗಳಿಸಲಾಗುವ ಲಾಭವನ್ನು ಸಮಾನತೆಗಾಗಿ ದುಡಿಯುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ ನೀಡಲಾಗುವುದು.