ಫ್ರೆಂಚ್‌ ಹೇರ್‌ಕಟ್‌ ವಿಶ್ವದೆಲ್ಲೆಡೆ ಫೇಮಸ್‌. ಆದರೆ, ಪಾಕಿಸ್ತಾನದ ಖೈಬರ್‌ ಪಖ್ತೂಖ್ವಾಂ ಪ್ರಾಂತ್ಯದಲ್ಲಿ ಕ್ಷೌರಿಕರು ಫ್ರೆಂಚ್‌ ಹಾಗೂ ಇಂಗ್ಲಿಷ್‌ ಸ್ಟೈಲ್‌ನಲ್ಲಿ ಗಡ್ಡ ಮತ್ತು ಕೇಶವಿನ್ಯಾಸ ಮಾಡುವುದಕ್ಕೆ ನಿಷೇಧ ಹೇರಿದ್ದಾರೆ.

ಫ್ರೆಂಚ್‌ ಹೇರ್‌ಕಟ್‌ ವಿಶ್ವದೆಲ್ಲೆಡೆ ಫೇಮಸ್‌. ಆದರೆ, ಪಾಕಿಸ್ತಾನದ ಖೈಬರ್‌ ಪಖ್ತೂಖ್ವಾಂ ಪ್ರಾಂತ್ಯದಲ್ಲಿ ಕ್ಷೌರಿಕರು ಫ್ರೆಂಚ್‌ ಹಾಗೂ ಇಂಗ್ಲಿಷ್‌ ಸ್ಟೈಲ್‌ನಲ್ಲಿ ಗಡ್ಡ ಮತ್ತು ಕೇಶವಿನ್ಯಾಸ ಮಾಡುವುದಕ್ಕೆ ನಿಷೇಧ ಹೇರಿದ್ದಾರೆ.

ಅವರೇನಿದ್ದರೂ ಇಸ್ಲಾಂ ಸಾಂಪ್ರದಾಯದಂತೆ ಕೇಶ ವಿನ್ಯಾಸವನ್ನು ಮಾತ್ರ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಫ್ರೆಂಚ್‌ ಹಾಗೂ ಇಂಗ್ಲಿಷ್‌ ಮಾದರಿ ಕೇಶವಿನ್ಯಾಸ ಮಾಡುವುದು ಇಸ್ಲಾಂ ವಿರೊಧಿಯಾಗಿದೆ.

ನಾವು ವಿದೇಶದ ಹೇರ್‌ಸ್ಟೆ್ರೖಲ್‌ಗಳೆಲ್ಲಾ ನಮಗೆ ಬೇಕಾಗಿಲ್ಲ. ತಮ್ಮ ಸಂಘಟನೆಯ 200,000 ಕ್ಷೌರಿಕರು ಈ ನಿರ್ಧಾರವನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ಸಂಘಟನೆಯ ಅಧ್ಯಕ್ಷ ಶರೀಫ್‌ ಕಲ್ಹೋ ಆದೇಶಿಸಿದ್ದಾರೆ.