2010ರ ಹೈಟಿ ಭೂಕಂಪದ ವೇಳೆ ಬದುಕುಳಿದ 25 ವರ್ಷದ ಸುಂದರಿ ರಖೇಲ್‌ ಪೆಲಿಸ್ಸೀರ್‌ ಅವರು ಮೊದಲ ರನ್ನರ್‌ಅಪ್‌ ಹಾಗೂ ಕೊಲಂಬಿಯಾದ 23 ವರ್ಷದ ಆ್ಯಂಡ್ರಿಯಾ ತೋವರ್‌ ಎರಡನೇ ರನ್ನರ್‌ಅಪ್‌ ಪ್ರಶಸ್ತಿಗೆ ಭಾಜನರಾದರು.
ಫಿಲಿಪ್ಪೀನ್ಸ್(ಜ.31): ಫ್ರಾನ್ಸ್ನ ಸಣ್ಣ ಪಟ್ಟಣವೊಂದರ 23 ವರ್ಷದ ಚೆಲುವೆ ಐರಿಸ್ ಮಿಟ್ಟೆನೇರ್ ಅವರು ಈ ಬಾರಿಯ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸುಶ್ಮಿತಾ ಸೇನ್ ತಂಡದಿಂದ ಆಯ್ಕೆಯಾಗಿದ್ದ ಬೆಂಗಳೂರಿನ ರೋಶ್ಮಿತಾ ಹರಿಮೂರ್ತಿ ಅಂತಿಮ 13ರ ಸುತ್ತು ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
2010ರ ಹೈಟಿ ಭೂಕಂಪದ ವೇಳೆ ಬದುಕುಳಿದ 25 ವರ್ಷದ ಸುಂದರಿ ರಖೇಲ್ ಪೆಲಿಸ್ಸೀರ್ ಅವರು ಮೊದಲ ರನ್ನರ್ಅಪ್ ಹಾಗೂ ಕೊಲಂಬಿಯಾದ 23 ವರ್ಷದ ಆ್ಯಂಡ್ರಿಯಾ ತೋವರ್ ಎರಡನೇ ರನ್ನರ್ಅಪ್ ಪ್ರಶಸ್ತಿಗೆ ಭಾಜನರಾದರು. ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರು ತೀರ್ಪುಗಾರರ ಪೈಕಿ ಒಬ್ಬರಾಗಿ ಕಾರ್ಯನಿರ್ವಹಿಸಿದರು.
