ಸರ್ಕಾರದಿಂದ ಉಚಿತ ಸ್ತನ ಸರ್ಜರಿ ಸೇವೆ

First Published 22, Feb 2018, 4:10 PM IST
Free cosmetic breast surgery at govt hospital
Highlights

ಸೌಂದರ್ಯವರ್ಧನೆಗಾಗಿ ಸ್ತನ ಸರ್ಜರಿ ಮಾಡೋದು ಸಾಮಾನ್ಯವಾಗಿದೆ. ಆದರೆ ಇದು ದುಬಾರಿಯಾಗಿರುವುದರಿಂದ ಬಡವರ ಕೈಗೆಟಕುತ್ತಿರಲಿಲ್ಲ. ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಲಭ್ಯ ಎನ್ನುವಂತಾಗಿತ್ತು. ಆದರೆ ಈಗ ಬಡವರು ಕೂಡಾ ಸ್ತನ ಸರ್ಜರಿ ಮಾಡಿಸಿಕೊಂಡು ತಮ್ಮ ಸೌಂದರ್ಯ ವೃದ್ಧಿಸಿಕೊಳ್ಳಬಹುದು.

ಚೆನ್ನೈ (ಫೆ.22): ಸೌಂದರ್ಯವರ್ಧನೆಗಾಗಿ ಸ್ತನ ಸರ್ಜರಿ ಮಾಡೋದು ಸಾಮಾನ್ಯವಾಗಿದೆ. ಆದರೆ ಇದು ದುಬಾರಿಯಾಗಿರುವುದರಿಂದ ಬಡವರ ಕೈಗೆಟಕುತ್ತಿರಲಿಲ್ಲ. ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಲಭ್ಯ ಎನ್ನುವಂತಾಗಿತ್ತು. ಆದರೆ ಈಗ ಬಡವರು ಕೂಡಾ ಸ್ತನ ಸರ್ಜರಿ ಮಾಡಿಸಿಕೊಂಡು ತಮ್ಮ ಸೌಂದರ್ಯ ವೃದ್ಧಿಸಿಕೊಳ್ಳಬಹುದು.

ತಮಿಳುನಾಡು ಸರ್ಕಾರ ಉಚಿತವಾಗಿ ಸ್ತನ ಸರ್ಜರಿ ಯೋಜನೆಯನ್ನು ಜಾರಿಗೆ ತಂದಿದೆ. ಸ್ಟಾನ್ಲೆ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಉಚಿತ ಕಾಸ್ಮೆಟಿಕ್ ಸರ್ಜರಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದಕ್ಕೆ ಸದ್ಯಕ್ಕೆ ಆರೋಗ್ಯ ಇಲಾಖೆಯೇ ಅನುದಾನವನ್ನು ನೀಡಲಿದ್ದು, ಮುಂಬರುವ ದಿನಗಳಲ್ಲಿ ವಿಮಾ ಸೌಲಭ್ಯ ನೀಡುವಂತೆ ವಿಮಾದಾರರ ಜೊತೆ ಅಧಿಕಾರಿಗಳು ಮಾತನಾಡಲಿದ್ದಾರೆ ಎಂದು ಆರೋಗ್ಯ ಸಚಿವ ವಿಜಯ್ ಭಾಸ್ಕರ್ ಹೇಳಿದ್ದಾರೆ. 
 

loader