Asianet Suvarna News Asianet Suvarna News

ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಬಲಿ

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ತರಬೇತಿ ಶಿಬಿರದ ಮೇಲೆ ಉಗ್ರಗಾಮಿಗಳು ತಡರಾತ್ರಿ ದಾಳಿ ನಡೆಸಿದ್ದಾರೆ.

Four troopers killed as Jaish militants attack CRPF camp in Jammu Kashmir  s Pulwama

ಶ್ರೀನಗರ (ಡಿ.31): ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ತರಬೇತಿ ಶಿಬಿರದ ಮೇಲೆ ಉಗ್ರಗಾಮಿಗಳು ತಡರಾತ್ರಿ ದಾಳಿ ನಡೆಸಿದ್ದಾರೆ.

ಈ ದಾಳಿಯಲ್ಲಿ  ಸಿಆರ್'ಪಿಎಫ್'ನ ನಾಲ್ವರು ಯೋಧರು ಹುತಾತ್ಮರಾದರೆ  ಇತರ ಮೂವರು ಯೋಧರು ಗಾಯಗೊಂಡಿದ್ದಾರೆ. ಅಲ್ಲದೇ  ಭಾರತೀಯ  ಸೇನೆಯ  ಗುಂಡಿನ ದಾಳಿಗೆ ಮೂವರು ಉಗ್ರರು ಸಾವನ್ನಪ್ಪಿದ್ದಾರೆ.

ಜೈಶ್-ಇ-ಮೊಹಮ್ಮದ್ ಉಗ್ರಗಾಮಿಗಳ ಗುಂಪು ರಾತ್ರಿ  2 ಗಂಟೆ ಸುಮಾರಿಗೆ ಕಾಶ್ಮೀರ ಕಣಿವೆಯ ಲೆಥಪೋರಾ ಗ್ರಾಮದ ಸಿಆರ್'ಪಿಎಫ್​​'ನ 185 ನೇ ಬ್ಯಾಟಲಿನ್  ಶಿಬಿರದ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಕಾರ್ಯಚರಣೆ ಇನ್ನು ಮುಂದುವರೆದಿದ್ದು,  ಗಾಯಗೊಂಡಿರುವ ಯೋಧರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Latest Videos
Follow Us:
Download App:
  • android
  • ios