ಐದು ಮಂದಿ ಯೋಧರು ಕೂಡ ಒಂದೇ ಕಾರಿನಲ್ಲಿ  ಪ್ರಯಾಣಿಸುತ್ತಿದ್ದರು. ಈ ವೇಳೆ  ಶ್ರೀನಗರ ಹಾಗೂ ಜಮ್ಮುವಿನ ರಾಷ್ಟ್ರೀಯ ಹೆದ್ದಾರಿ ಬಳಿಯ ಶೈತಾನಿ ನಲ್ಲಾ ಬಳಿ ಕಾರು, ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ.

ಜಮ್ಮು(ಡಿ.1): ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಕಾರೊಂದು ಕಂದಕಕ್ಕೆ ಉರುಳಿಬಿದ್ದು ನಾಲ್ವರು ಯೋಧರು ಮೃತರಾಗಿದ್ದು, ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಐದು ಮಂದಿ ಯೋಧರು ಕೂಡ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಶ್ರೀನಗರ ಹಾಗೂ ಜಮ್ಮುವಿನ ರಾಷ್ಟ್ರೀಯ ಹೆದ್ದಾರಿ ಬಳಿಯ ಶೈತಾನಿ ನಲ್ಲಾ ಬಳಿ ಕಾರು, ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಗಾಯಾಳು ಯೋಧರನ್ನು ಶ್ರೀನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.