ನವದೆಹಲಿ (ಸೆ.30): ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಮಾರ್ಕಂಡೆಯ ಕಾಟ್ಜು ಕನ್ನಡಿಗರ ಬೆಂಬಲಕ್ಕೆ ನಿಂತಿದ್ದಾರೆ. ಕಾವೇರಿ ವಿಚಾರದಲ್ಲಿ ಕರ್ನಾಟಕ್ಕೆ ಆಗಿರುವ ಅನ್ಯಾಯವನ್ನು ವ್ಯಂಗ್ಯಚಿತ್ರವೊಂದರ ಮೂಲಕ ವ್ಯಕ್ತಪಡಿಸಿದ್ದಾರೆ.
ವ್ಯಂಗ್ಯಚಿತ್ರದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀರು ಇಲ್ಲವೆಂದು ಹೇಳುತ್ತಿದ್ದರೂ, ಖಾಲಿ ಇರುವ ಬಾವಿಯಿಂದ ತುಂಬಿದ ಬಾವಿಗೆ ನೀರು ಹರಿಸಲು ಆದೇಶಿಸಲಾಗುತ್ತಿದೆ ಎಂದು ತೋರಿಸಲಾಗಿದೆ.
ಆದುದರಿಂದ ಆದೇಶವನ್ನು ಪಾಲಿಸದ ಕನ್ನಡಿಗರೆಲ್ಲರನ್ನು ಜೈಲಿಗೆ ಕಳುಹಿಸಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
