'ಓರಿಸ್ಸಾದವರು ಬಡವರು ಹಾಗೂ ಭ್ರಮನಿರಸಿಗಳೆಂದು' ಫೇಸ್'ಬುಕ್'ನಲ್ಲಿ ತಮ್ಮ ಬರೆದುಕೊಂಡು ವಿವಾದ ಸೃಷ್ಟಿಸಿದ್ದಾರೆ.

ಭುವನೇಶ್ವರ(ಅ.16): ಸದಾ ವಿವಾದಗಳನ್ನು ಮೈಗಂಟಿಸಿಕೊಳ್ಳುವ ಸುಪ್ರಿಂ ಕೋರ್ಟ್'ನ ನಿವೃತ್ತ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈಗಿನ ಅವರ ಮಾತುಗಳು ಓರಿಯಾದವರ ಮೇಲೆ ಬಿದ್ದಿದ್ದು, 'ಓರಿಸ್ಸಾದವರು ಬಡವರು ಹಾಗೂ ಭ್ರಮನಿರಸಿಗಳೆಂದು' ಫೇಸ್'ಬುಕ್'ನಲ್ಲಿ ತಮ್ಮ ಬರೆದುಕೊಂಡು ವಿವಾದ ಸೃಷ್ಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮಾತುಗಳಿಗೆ ಓರಿಸ್ಸಾ ಜನಗಳಲ್ಲದೆ ದೇಶಾದಾದ್ಯಂತ ಕಾಟ್ಜು ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ತಮ್ಮ ಮಾತುಗಳಿಗೆ ಕ್ಷಮೆ ಕೇಳಿದ್ದಾರೆ. ಹಲವು ಒರಿಸ್ಸಾ ಮಂದಿ ಕಾಟ್ಚು ಅವರ ಮಾತುಗಳಿಗೆ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.