ಗಣ್ಯಾತಿಗಣ್ಯರು ಜೈಲು ಸೇರಿದಾಕ್ಷಣ ಅವರ ಜಾಮೀನು ಅರ್ಜಿಯ ತ್ವರಿತ ವಿಚಾರಣೆ, ಪದೇ ಪದೇ ಪರೋಲ್‌ ಪಡೆದು ಮನೆಗೆ ಹೋಗಿ ಬರುವುದು ಸಾಮಾನ್ಯ. ಆದರೆ ಸಹದ್ಯೋಗಿಗಳನ್ನು ಹತ್ಯೆಗೈದ ಆರೋಪದಲ್ಲಿ 27 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಯೋಧ ದೇವೇಂದ್ರನಾಥ್‌ ರಾಯ್‌ ಅವರಿಗೆ ನ್ಯಾಯಾಲಯಗಳು ಒಮ್ಮೆಯೂ ಪರೋಲ್‌ ನೀಡಿಲ್ಲ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ನವದೆಹಲಿ: ಗಣ್ಯಾತಿಗಣ್ಯರು ಜೈಲು ಸೇರಿದಾಕ್ಷಣ ಅವರ ಜಾಮೀನು ಅರ್ಜಿಯ ತ್ವರಿತ ವಿಚಾರಣೆ, ಪದೇ ಪದೇ ಪರೋಲ್‌ ಪಡೆದು ಮನೆಗೆ ಹೋಗಿ ಬರುವುದು ಸಾಮಾನ್ಯ. ಆದರೆ ಸಹದ್ಯೋಗಿಗಳನ್ನು ಹತ್ಯೆಗೈದ ಆರೋಪದಲ್ಲಿ 27 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಯೋಧ ದೇವೇಂದ್ರನಾಥ್‌ ರಾಯ್‌ ಅವರಿಗೆ ನ್ಯಾಯಾಲಯಗಳು ಒಮ್ಮೆಯೂ ಪರೋಲ್‌ ನೀಡಿಲ್ಲ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ರಾಯ್‌ ಅವರ ಪತ್ನಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಕೋರ್ಟ್‌, ಈ ಬಗ್ಗೆ ಉತ್ತರಪ್ರದೇಶ ಸರ್ಕಾರ ಮತ್ತು ನೈನಿ ಕಾರಾಗೃಹದ ಅಧಿಕಾರಿಗಳ ಬಳಿ ಈ ಕುರಿತು ವಿವರಣೆ ಕೇಳಿದೆ.

1991ರಲ್ಲಿ ದೇವೇಂದ್ರನಾಥ್‌ ಲ್ಯಾನ್ಸ್‌ ನಾಯಕ್‌ ಆಗಿಮಥುರಾದಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಇಬ್ಬರು ಸಹೋದ್ಯೋಗಿಗಳನ್ನು ಹತ್ಯೆಗೈದ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ಕುರಿತ ನ್ಯಾಯಬದ್ಧ ತನಿಖೆ ನಡೆಯದೆ, ಶಿಕ್ಷೆ ಪ್ರಮಾಣದ ಸ್ಪಷ್ಟನಿಲುವಿಲ್ಲದೆ ಕಳೆದ 27 ವರ್ಷಗಳಿಂದ ನೈನಿ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.