ರಿಸರ್ಚ್ & ಅನಾಲಿಸಿಸ್ ವಿಂಗ್ (ರಾ) ಮಾಜಿ ಮುಖ್ಯಸ್ಥ ರಾಜಿಂದರ್ ಖನ್ನಾ ಡಿಸೆಂಬರ್ 2014ರಿಂದ 2 ವರ್ಷಗಳ ಕಾಲ ರಾ ಮುಖ್ಯಸ್ಥರಾಗಿದ್ದ ಖನ್ನಾ

ನವದೆಹಲಿ: ರಿಸರ್ಚ್ & ಅನಾಲಿಸಿಸ್ ವಿಂಗ್ (ರಾ) ಮಾಜಿ ಮುಖ್ಯಸ್ಥ ರಾಜಿಂದರ್ ಖನ್ನಾ ಅವರನ್ನು ರಾಷ್ಟ್ರಿಯ ಭದ್ರತಾ ಉಪ-ಸಲಹೆಗಾರನಾಗಿ ನೇಮಿಸಲು ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ಒಪ್ಪಿಗೆ ನೀಡಿದೆ.

ಖನ್ನಾ 1978ರಲ್ಲಿ ರಾಗೆ ಸೇರಿದ್ದರು. ಡಿಸೆಂಬರ್ 2014ರಿಂದ 2 ವರ್ಷಗಳ ಕಾಲ ರಾ ಮುಖ್ಯಸ್ಥರಾಗಿದ್ದ ಅವರು ಹಲವಾರು ಭಯೋತ್ಪಾದನಾ ಕಾರ್ಯಾಚರಣೆಗಳನ್ನು ಸಮರ್ಥವಾಗಿ ಮುನ್ನಡೆಸಿದ್ದರು.

ಪ್ರಸ್ತುತ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಸೆಕ್ರೆಟರಿಯಾಟ್'ನಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.