ಕ್ಯೂಬಾದ ಮಾಜಿ ಅಧ್ಯಕ್ಷ ಹಾಗೂ ಕಮ್ಯುನಿಸ್ಟ್ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ತನ್ನ 90 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಸುಮಾರು 5 ದಶಕಗಳ ಕಾಲ ಕ್ಯೂಬಾವನ್ನಾಳಿದ ಸರ್ವಾಧಿಕಾರಿ, 1976 ರಿಂದ 2008ರವರೆಗೆ ಕ್ಯೂಬಾದ ಅಧ್ಯಕ್ಷರಾಗಿದ್ದರು. 2008 ರ ಫೆಬ್ರವರಿ 19ರಂದು ಅಧಿಕೃತವಾಗಿ ರಾಜೀನಾಮೆ ನೀಡಿದ ಕ್ಯಾಸ್ಟ್ರೋ ಅಧಿಕಾರದ ಚುಕ್ಕಾಣಿಯನ್ನು ತನ್ನ ತಮ್ಮ ರಾವ್ಲ್ ಸುಪರ್ಧಿಗೊಪ್ಪಿಸಿದ್ದರು.
ಕ್ಯೂಬಾ(ನ.26): ಕ್ಯೂಬಾದ ಮಾಜಿ ಅಧ್ಯಕ್ಷ ಹಾಗೂ ಕಮ್ಯುನಿಸ್ಟ್ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ತನ್ನ 90 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.
ಸುಮಾರು 5 ದಶಕಗಳ ಕಾಲ ಕ್ಯೂಬಾವನ್ನಾಳಿದ ಸರ್ವಾಧಿಕಾರಿ, 1976 ರಿಂದ 2008ರವರೆಗೆ ಕ್ಯೂಬಾದ ಅಧ್ಯಕ್ಷರಾಗಿದ್ದರು. 2008 ರ ಫೆಬ್ರವರಿ 19ರಂದು ಅಧಿಕೃತವಾಗಿ ರಾಜೀನಾಮೆ ನೀಡಿದ ಕ್ಯಾಸ್ಟ್ರೋ ಅಧಿಕಾರದ ಚುಕ್ಕಾಣಿಯನ್ನು ತನ್ನ ತಮ್ಮ ರಾವ್ಲ್ ಸುಪರ್ಧಿಗೊಪ್ಪಿಸಿದ್ದರು.
1926, ಆಗಸ್ಟ್ 13ರಂದು ಶ್ರೀಮಂತ ಮನೆತನದಲ್ಲಿ ಹುಟ್ಟಿದ ಫಿಡಲ್ ಕ್ಯಾಸ್ಟ್ರೊ, 1960ರಲ್ಲಿ ಕ್ರಾಂತಿಕಾರಿ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಅಮೇರಿಕಾಕ್ಕೆ ಸೆಡ್ಡು ಹೊಡೆದ ಏಕೈಕ ವ್ಯಕ್ತಿಯಾಗಿದ್ದ ಫಿಡೆಲ್ ಕ್ಯಾಸ್ಟ್ರೊ ನನ್ನು ಇವರ ಬೆಂಬಲಿಗರು 'ಕ್ಯೂಬಾವನ್ನು ಆ ದೇಶದ ಮಕ್ಕಳಿಗೆ ಒಪ್ಪಿಸಿದ ಮಹಾನ್ ವ್ಯಕ್ತಿ' ಎಂದು ಬಣ್ಣಿಸುತ್ತಾರೆ.
