ಪಾಕಿಸ್ತಾನದ ಮಾಜಿ ಸಚಿವರೊಬ್ಬರಿಗೆ ಇವರು ಭಾರತದ ಪ್ರಧಾನಿಯಾಗಬೇಕಂತೆ! ಅದು ಯಾಕೋ ಗೊತ್ತಿಲ್ಲ. ಮೂಲ ಕಾರಣ ಅವರೇ ಹೇಳಬೇಕು.. ಹಾಗಾದ್ರೆ ಏನಪ್ಪಾ ಇದು ಸುದ್ದಿ..
ನವದೆಹಲಿ[ಸೆ.24] ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಮಾಜಿ ಸಚಿವ ರೆಹಮಾನ್ ಮಲಿಕ್ ಗೆ ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಬೇಕಂತೆ. ಭಾರತೀಯರೆ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಿ,,ಎದ್ದೇಳಿ ಎಂಭ ಅರ್ಥ ಬರುವಂತಹ ಟ್ವೀಟ್ ಮಾಡಿದ್ದು ಸುದ್ದಿ ಮಾಡುತ್ತಿದೆ.
ಪ್ರಧಾನಿ ಮೋದಿ ಅವರ ಮೇಲೆ ಆರೋಪಗಳ ಸುರಿಮಳೆ ಮಾಡಿರುವ ಮಲಿಕ್ ಗೆ ಬಿಜೆಪಿ ಸರಿಯಾದ ತಿರುಗೇಟು ನೀಡಿದೆ. ಗಡಿಯಲ್ಲಿ ಯೋಧರು ಮತ್ತು ಪಾಕ್ ಪ್ರಾಯೋಜಕತ್ವದ ಉಗ್ರರ ನಡುವೆ ಪ್ರತಿ ದಿನ ಘರ್ಷಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಾಡಿರುವ ಟ್ವೀಟ್ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ.
