ಬಳ್ಳಾರಿ[ಸೆ.15]: ಕೋಟಿ ಕೊಟ್ಟರೆ ಬಿಜೆಪಿಯಲ್ಲಿ ಮಂತ್ರಿಯಾಗಬಹುದು. ನೂರು ಕೋಟಿ ಕೊಟ್ಟರೆ ಡಿಸಿಎಂ ಸಹ ಆಗಬಹುದು ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಆರೋಪಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣ ಸಂಪೂರ್ಣ ಹಳಿ ತಪ್ಪಿದೆ. ಹಣವಿದ್ದವರಿಗೆ ಮಾತ್ರ ಮನ್ನಣೆ ಎಂಬ ಸ್ಥಿತಿ ಬಂದಿದೆ. ಬಿಜೆಪಿಯಲ್ಲಿ ಮಂತ್ರಿ ಸ್ಥಾನ, ಡಿಸಿಎಂ ಸ್ಥಾನಗಳು ಮಾರಾಟಕ್ಕಿವೆ. ಇದನ್ನು ನನ್ನೊಬ್ಬನ ಆರೋಪವಲ್ಲ. ಬಿಜೆಪಿಯವರೇ ಹೇಳುತ್ತಿದ್ದಾರೆ ಎಂದು ಉಗ್ರಪ್ಪ ಹೇಳಿದರು.

ರಾಜ್ಯ ಮತ್ತು ರಾಷ್ಟ್ರದಲ್ಲಿ ಸೇಡಿನ ರಾಜಕೀಯ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ ವಿರುದ್ಧ ಸೇಡಿನ ರಾಜಕಾರಣಕ್ಕಾಗಿ ಇಡಿ ತನಿಖೆ ನಡೆದಿದೆ. ಡಿ.ಕೆ.ಶಿವಕುಮಾರ್‌ ಅವರ ಸಂಪತ್ತು ಮೊದಲು .8 ಕೋಟಿ ಎಂದರು. ಇದೀಗ .800 ಕೋಟಿ ಎನ್ನುತ್ತಿದ್ದಾರೆ. ಬಿಜೆಪಿಯ ಅಮಿತ್‌ ಶಾ ಹಾಗೂ ನಿತಿನ್‌ ಗಡ್ಕರಿ ಅವರ ಮಕ್ಕಳ ಆಸ್ತಿ ಎಷ್ಟುಪಟ್ಟು ಹೆಚ್ಚಾಗಿದೆ ಎಂಬುದು ಇಡಿ ಅವರಿಗೆ ಮಾಹಿತಿ ಇಲ್ಲವೇ ಎಂದು ಪ್ರಶ್ನಿಸಿದರು.