ಭಾರೀ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ  ಮಾಜಿ ಪ್ರಧಾನಿಯೋರ್ವರನ್ನು ಭ್ರಷ್ಟಾಚಾರ ನಿಗ್ರಹ ದಳ ಮಂಗಳವಾರ ಬಂಧಿಸಿದೆ. 

ಕೌಲಾಲಂಪುರ: ಭಾರೀ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಮಲೇಷಿಯಾ ಮಾಜಿ ಪ್ರಧಾನಿ ನಜೀಬ್‌ ರಝಾಕ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಮಂಗಳವಾರ ಬಂಧಿಸಿದೆ. 

ಇತ್ತೀಚೆಗೆ ಅವರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು 1774 ಕೋಟಿ ರು. ಮೌಲ್ಯದ ಚಿನ್ನಾಭರಣಗಳು, ನಗದು ಹಾಗೂ ದುಬಾರಿ ಬೆಲೆಯ ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ನಜೀಬ್‌ ಪ್ರಧಾನಿಯಾಗಿದ್ದಾಗ ಸ್ಥಾಪಿಸಿದ ‘1 ಮಲೇಷ್ಯಾ ಡೆವಲಪ್ಮೆಂಟ್‌ ಬರ್ಹಡ್‌’ (1 ಎಂಡಿಬಿ)ನಲ್ಲಿ ಕೋಟ್ಯಂತರ ಡಾಲರ್‌ ಭ್ರಷ್ಟಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಸಂಬಂಧ ಅವರ ವಿರುದ್ಧ ಆರೋಪಪಟ್ಟಿದಾಖಲಿಸಿಕೊಳ್ಳಲಾಗಿದೆ.