Asianet Suvarna News Asianet Suvarna News

ಮಾಜಿ ಶಾಸಕ ವೈಎಸ್‌ವಿ ದತ್ತಾಗೆ ಪತ್ನಿ ವಿಯೋಗ!

ಮಾಜಿ ಶಾಸಕ ವೈಎಸ್ ವಿ ದತ್ತ ಪತ್ನಿ ವಿಯೋಗ! ಅನಾರೋಗ್ಯದಿಂದ ನಿಧನರಾದ ನಿರ್ಮಲಾ ದತ್ತ! ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ!ನಿರ್ಮಲಾ ಅಂತಿಮ ದಶರ್ಶನ ಪಡೆದ ಮಾಜಿ ಪ್ರಧಾನಿ
 

Former Law Maker YSV Datta's wife is no more
Author
Bengaluru, First Published Aug 22, 2018, 9:54 PM IST
  • Facebook
  • Twitter
  • Whatsapp

ಬೆಂಗಳೂರು(ಆ.22): ಮಾಜಿ ಶಾಸಕ,  ವೈಎಸ್ ವಿ ದತ್ತ ಅವರ ಪತ್ನಿ ನಿರ್ಮಲಾ ದತ್ತ ಇಂದು ಸಂಜೆ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಮಲಾ, ಇಂದು ಸಂಜೆ ನಿಧನ ಹೊಂದಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಿರ್ಮಲಾ, ಪತಿ ಮಾಜಿ ಶಾಸಕ ದತ್ತ ಹಾಗೂ ಪುತ್ರಿ ಶ್ರೀದೇವಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅನಾರೋಗ್ಯ ಪೀಡಿತರಾಗಿದ್ದ ಅವರು ಕಳೆದ ಒಂದು ವರ್ಷದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬೆಂಗಳೂರಿನಲ್ಲಿ ವಾಸವಾಗಿದ್ದ ಅವರು ದತ್ತ ಅವರ ಚುನಾವಣೆ ಸಂದರ್ಭ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಈ ಬಾರಿಯೂ ತಮ್ಮ ಅನಾರೋಗ್ಯದ ನಡುವೆಯೂ ದತ್ತ ಅವರ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅವರು ಮತದಾನ ಕೂಡ ಚಲಾಯಿಸಿದ್ದರು.

Former Law Maker YSV Datta's wife is no more

ಇನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ ನಿರ್ಮಲಾ ದತ್ತ ಅವರ ಅಂತಿಮ ದರ್ಶನ ಪಡೆದರು.

Follow Us:
Download App:
  • android
  • ios