ಹೈದರಾಬಾದ್ (ಫೆ.10): ಇನ್ಫೋಸಿಸ್ ನ ಮಾಜಿ ಸಿಎಫ್ಒ ಮೋಹನ್ ದಾಸ್ ಪೈ ಸಿಇಒ ವಿಶಾಲ್ ಸಿಕ್ಕಾ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ (ಫೆ.10): ಇನ್ಫೋಸಿಸ್ ನ ಮಾಜಿ ಸಿಎಫ್ಒ ಮೋಹನ್ ದಾಸ್ ಪೈ ಸಿಇಒ ವಿಶಾಲ್ ಸಿಕ್ಕಾ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ಫೋಸಿಸ್ ನ ಸಾರಥ್ಯ ವಹಿಸಿಕೊಂಡಿರುವ ವಿಶಾಲ್ ಸಿಕ್ಕಾ ಷೇರುದಾರರ ಬಗ್ಗೆ ಗಮನ ನೀಡುತ್ತಿಲ್ಲ. ೊಬ್ಬ ಸಮರ್ಥ ಚೇರ್ ಮನ್ ನ ಅಗತ್ಯವಿದೆ ಎಂದು ಮೋಹನ್ ದಾಸ್ ಪೈ ಸಿಕ್ಕಾರವರ ಸಾಮರ್ಥದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ಪೋಸಿಸ್ ಸಂಸ್ಥಾಪಕರನ್ನು ಸಿಇಒ ಮಾಡುವುದು ನಾರಾಯಣ ಮೂರ್ತಿಯವರು ಮಾಡಿರುವ ತಪ್ಪು. ಇದರಿಂದ ಸಾಕಷ್ಟು ಸಿಬ್ಬಂದಿಗಳು ಕಂಪನಿಯನ್ನು ತೊರೆದಿದ್ದಾರೆ.

ನನಗೆ ಬಹಳ ಬೇಸರವಾಗುತ್ತಿದೆ. 17 ವರ್ಷ ಇಲ್ಲಿ ಕೆಲಸ ಮಾಡಿದ್ದೇನೆ. ಇನ್ಫೋಸಿಸ್ ನ್ನು ದೊಡ್ಡ ಸಂಸ್ಥೆಯಾಗಿ ಬೆಳೆಸುವುದಕ್ಕೆ ನಾವೆಲ್ಲಾ ಸಾಕಷ್ಟು ಕಷ್ಟಪಟ್ಟಿದ್ದೇವೆ. ಆದರೆ ಈಗ ನಡೆಯುತ್ತಿರುವುದನ್ನು ಗಮನಿಸಿದರೆ ಬಹಳ ಬೇಸರವಾಗುತ್ತಿದೆ ಎಂದು ಮೋಹನ್ ದಾಸ್ ಪೈ ಹೇಳಿದ್ದಾರೆ.